ಬೆಳಗಾವಿ- ತಾಲ್ಲೂಕಿನ ಹಾಲಿ ಜಿಲ್ಲಾ ಪಂಚಾಯತಿ ಸದಸ್ಯೆ ಮತ್ತು ಓರ್ವ ಹಾಲಿ ತಾಲ್ಲೂಕಾ ಪಂಚಾಯತಿ ಸದಸ್ಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ.
ಸುಳೇಭಾವಿ ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯೆ ಲಕ್ಷ್ಮೀ ವಿಠ್ಠಲ ಪಾರ್ವತಿ,ಸುಳೆಭಾವಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ದೆ ಮಾಡಿ ಸೋತಿದ್ದಾರೆ.ಇವರು ಕಾಂಗ್ರೆಸ್ಸಿನ ಜಿಪಂ ಸದಸ್ಯರಾಗಿದ್ದಾರೆ.
ಬಾಳೆಕುಂದ್ರಿ ಕೆ.ಹೆಚ್ ಕ್ಷೇತ್ರದ ತಾಲ್ಲೂಕಾ ಪಂಚಾಯತಿ ಸದಸ್ಯ ನಿಲೇಶ್ ಚಂದಗಡಕರ ಅವರು ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ದೆ ಮಾಡಿದ್ದರು ಇವರನ್ನೂ ಮತದಾರರು ತಿರಸ್ಕಾರ ಮಾಡಿದ್ದಾರೆ.
ಬೆಳಗಾವಿ ತಾಲ್ಲೂಕಿನ ಒಬ್ಬರು ಹಾಲಿ ಜಿಲ್ಲಾ ಪಂಚಾಯತಿ ಸದಸ್ಯರು ಮತ್ತು ಓರ್ವ ಹಾಲಿ ತಾಲ್ಲೂಕ ಪಂಚಾಯತಿ ಸದಸ್ಯನನ್ನು ಮತದಾರರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ರಿಜೆಕ್ಟ್ ಮಾಡಿದ್ದಾರೆ…
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ