ಬೆಳಗಾವಿ- ಬೆಳಗಾವಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ,ಮಾಜಿ ಮಂತ್ರಿ,ಮಾಜಿ ಸಂಸದ, ವರ್ಕರ್, ಮೀಸೆ ಮಾವ ಎಂದೇ ಕರೆಲ್ಪಡುವ ಪ್ರಕಾಶ ಹುಕ್ಕೇರಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಈಗ ತಮ್ಮದೇ ಆದ ಶೈಲಿಯಲ್ಲಿ ಹೊಸ ಆರಂಭಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಕೆಪಿಸಿಸಿ ಅದ್ಯಕ್ಷ ,ಡಿಕೆ ಶಿವಕುಮಾರ್ ಮಾಜಿ ಸಿಎಂ ಸಿದ್ರಾಮಯ್ಯ,ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ,ಅವರು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ವಿಶೇಷ ಸಭೆ ಕರೆದಿದ್ದರು ಈ ಸಭೆಯಲ್ಲಿ ಹಿರಿಯ ನಾಯಕ ಪ್ರಕಾಶ ಹುಕ್ಕೇರಿ ಸೇರಿದಂತೆ,ಶಾಸಕರಾದ ಮಹಾಂತೇಶ ಕೌಜಲಗಿ,ಲಕ್ಷ್ಮೀ ಹೆಬ್ಬಾಳಕರ,ಅಂಜಲಿ ನಿಂಬಾಳ್ಕರ್ ಹಾಗು ಜಿಲ್ಲೆಯ ಪ್ರಮುಖ ನಾಯಕರು ಭಾಗವಹಿಸಿದ್ದರು.
ಸಭೆಯ ಆರಂಭದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರು, ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸುವಂತೆ ಸಲಹೆ,ಕೊಟ್ಟಿದ್ದು,ಸತೀಶ್ ಜಾರಕಿಹೊಳಿ ಅವರು ಸ್ಪರ್ದೆ ಮಾಡದದ್ದರೆ,ನನ್ನ ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರಿಗೆ ಟಕೆಟ್ ನೀಡಬೇಕೆಂದು ಲಕ್ಷ್ಮೀ ಹೆಬ್ಬಾಳಕರ ಅವರು,ಒತ್ತಾಯ ಮಾಡಿದಾಗ,ನಾನು ಸ್ಪರ್ದೆ ಮಾಡುತ್ತೇನೆ,ನಾನು ಸೀನೀಯರ್… ನನಗೆ ಟಿಕೆಟ್ ಕೊಡಿ ಎಂದು ಪ್ರಕಾಶ ಹುಕ್ಕೇರಿ ಟಿಕೆಟ್ ಡಿಮ್ಯಾಂಡ್ ಮಾಡಿದ ಬಳಿಕ ಸಭೆಯಲ್ಲಿ ಕೆಲವು ಕ್ಷಣ ಮೌನ..ಮುಜುಗರ… ಜೊತೆಗೆ ಎಲ್ಕರಿಗೂ ಅಚ್ಚರಿಯೇ ಅಚ್ವರಿ….!
ಎಲ್ಲಾ ನೀವೇ ಮಾಡಬೇಕಾದ್ರೆ,ನಮ್ಮಂತಹ ಹಿರಿಯರು ಏನು ಮಾಡಬೇಕು,ನಾನೂ ಆಕಾಂಕ್ಷಿಯಾಗಿದ್ದೇನೆ,ನನ್ನ ಹೆಸರನ್ನೂ ಹೈಕಮಾಂಡ್ ಗೆ ಶಿಫಾರಸ್ಸು ಮಾಡುವಂತೆ ಪ್ರಕಾಶ ಹುಕ್ಕೇರಿ ಅವರು ಒತ್ತಾಯ ಮಾಡಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸುಧೀರ್ಘ ಚರ್ಚೆ ನಡಸಿದ ಬಳಿಕ,ಕೆಪಿಸಿಸಿ ಮೂವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದದೆ.
ಒಟ್ಟಾರೆ ಬೆಳಗಾವಿ ಅಭ್ಯರ್ಥಿ ಯನ್ನು ಅಂತಿಮಗೊಳಿಸುವ ಸಭೆ ಬೆಂಗಳೂರಿನಲ್ಲಿ ನಡೆದಿದ್ದು ಪ್ರಕಾಶ್ ಹುಕ್ಕೇರಿ ಅವರು ತಮಗೆ ಟಿಕೆಟ್ ಕೊಡುವಂತೆ ಗುಡುಗಿದ್ದು ವಿಶೇಷವಾಗಿದೆ.ಬೆಳಗಾವಿ ಜಿಲ್ಲೆಯಲ್ಲಿ ಮತ್ತೇ ಮೀಸೆ ಮಾವನ ಆಟ ಶುರುವಾಗಿದೆ….