ಬೆಳಗಾವಿ- ಮಸ್ಯಾಜ್ ಸೆಂಟರ್ ಮೇಲೆ ದಾಳಿ ಮಾಡಿರುವ ಸೈಬರ್ ಪೋಲೀಸರು,ಸ್ಪಾನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಇಬ್ಬರ ಬಂಧಸಿ ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.
ಮೂವರು ಜನ ಯುವತಿಯರನ್ನು ರಕ್ಷಣೆ ಮಾಡಿದ ಬೆಳಗಾವಿ ಸಿ ಇ ಎನ್ ಪೊಲೀಸರು, ಇಬ್ಬರನ್ನು ಬಂಧಿಸಿ ಅನೈತಿಕ ಚಟುವಟಿಕೆ ನಡೆಸಲು ಬಳಿಸುತ್ತಿದ್ದ ಕಾಂಡೋಮ್ ಸೇರಿದಂತೆ ಇತರ ಸಾಮುಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ. ಸೈಬರ್ ಪೋಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.ಬೆಳಗಾವಿಯ ಟಿಳಕವಾಡಿಯ ಬಳಿ ಅಕ್ರಮವಾಗಿ ನಡೆಸುತ್ತಿದ್ದ ಸ್ಪಾ ಮೇಲೆ ದಾಳಿ ನಡೆಸಿದ್ದಾರೆ. ಸ್ಪಾ ಎಂದು ಪರ್ಮಿಷನ್ ಪಡೆದು ಅಮಾಯಕ ಹೆಣ್ಣು ಮಕ್ಕಳನ್ನು ಅನೈತಿಕ ಚಟುವಟಿಕೆಗೆ ಬಳಸುತ್ತಿದ್ದ ಖದೀಮರು ಈಗ ಪೋಲೀಸರ ಅತಿಥಿಯಾಗಿದ್ದಾರೆ. ಕೇದಾರಿ ಶಿಂಧೆ,ಮತ್ತು ಪ್ರಕಾಶ ಯಳ್ಳೂಕರ್ ಬಂಧಿತ ಆರೋಪಿಗಳಾಗಿದ್ದಾರೆ.
ನ್ಯೂ ಗೇಟ್ ವೇ ಯುನಿಸೆಕ್ಸ್ ಸ್ಪಾ ಹೆಸರಿನಲ್ಲಿ ಸ್ಪಾ ಒಪನ್ ಮಾಡಿದ್ದ ಖದೀಮರು,ಮಸ್ಯಾಜ್ ಸೆಂಟರ್ ನಲ್ಲಿ ಅನೈತಿಕ ಚುಟುವಟಿಕೆ ನಡೆಸುತ್ತಿದ್ದರು. ಆನ್ ಲೈನ್ ಮೂಲಕ ಇವರು ಗ್ರಾಹಕರನ್ನು ಸೆಳೆಯುತ್ತಿದ್ದರೋ ಅಥವಾ ಚಾರ್ಟಿಂಗ್ ಡೇಟೀಂಗ್ ನಂತರ ಚೀಟೀಂಗ್ ಮಾಡುತ್ತಿದ್ದರೋ ಎನ್ನುವದು ತನಿಖೆಯ ನಂತರ ಗೊತ್ತಾಗಲಿದೆ ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ
ಬೆಳಗಾವಿ ಸಿ ಇ ಎನ್ ಪೊಲೀಸ್ ಇನೆಸ್ಪೆಕ್ಟರ್ ಗಡ್ಡೇಕರ ನೇತ್ರತ್ವದಲ್ಲಿ ದಾಳಿ ನಡೆದಿದ್ದು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.