ಬೆಳಗಾವಿ- ಮೂರು ವರ್ಷದ ಹಿಂದೆ ಲವ್ ಮಾಡಿ,ಮಂದಿರದಲ್ಲಿ ಮಾಂಗಲ್ಯ ಕಟ್ಟಿ ಲವ್ ಮ್ಯಾರೇಜ್ ಮಾಡಿಕೊಂಡಿದ್ದ ಪ್ರಿಯಕರ ಈಶ್ವರ ಇಂದು ಜೈಲು ಪಾಲಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಈಶ್ವರ ಪಂಚನ್ನವರ ಎಂಬಾತ ಮೂರು ವರ್ಷದ ಹಿಂದೆ 14 ವರ್ಷದ ಅಪ್ರಾಪ್ತ ಬಾಲಕಿಯ ಜೊತೆಗೆ ಲವ್ ಮಾಡಿ ಕಾಕತಿಯ ಸಿದ್ದೇಶ್ವರ ಮಂದಿರದಲ್ಲಿ ಮದುವೆ ಮಾಡಿಕೊಂಡಿದ್ದ ಅಂದು ಮದುವೆಯಾಗಿದ್ದ ಕಳೆದ ಮೂರು ವರ್ಷಗಳಿಂದ ಅಪ್ರಾಪ್ತ ಬಾಲಕಿಯ ಜೊತೆಗೆ ದಾಂಪತ್ಯ ಜೀವನ ನಡೆಸುತ್ತಿದ್ದ ಈಶ್ವರನ ವಿರುದ್ಧ ಕಾಕತಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾದ ಕಾರಣ ಈತ ಈಗ ಜೈಲು ಪಾಲಾಗಿದ್ದಾನೆ.
ಬೆಳಗಾವಿಯ 32 ವರ್ಷದ ಈಶ್ವರ ಪಂಚನ್ನವರ ಕಳೆದ ಮೂರು ವರ್ಷಗಳಿಂದ ಅಪ್ರಾಪ್ತ ಬಾಲಕಿಯ ಜೊತೆ ಸಂಸಾರ ಮಾಡಿ ಈಗ ಆತ ತನ್ನ ಸಂಗಾತಿಗೆ ಕೈಕೊಟ್ಟ ಹಿನ್ನಲೆಯಲ್ಲಿ ಈತನ ವಿರುದ್ಧ ಕಾಕತಿ ಪೋಲೀಸ್ ಠಾಣೆಯಲ್ಲಿ ಬಾಲಕಿಯ ಸಮಂಧಿಕರು ದೂರು ಕೊಟ್ಟ ಹಿನ್ನಲೆಯಲ್ಲಿ ಈಶ್ವರನ ವಿರುದ್ಧ ಪ್ರಕರಣ ದಾಖಲಾಗಿದೆ. ಲವ್ ಮ್ಯಾರೇಜ್ ಮಾಡಿಕೊಂಡು ಮೂರು ವರ್ಷದ ನಂತರ ಕೈಕೊಟ್ಟು ಡವ್ ಮಾಡಿದ ಪ್ರಿಯಕರ ತನ್ನ ಕರಿಯರ್ ಡ್ಯಾಮೇಜ್ ಮಾಡಿಕೊಂಡಿದ್ದಾನೆ.
ಮೂರು ವರ್ಷದ ಹಿಂದೆ ಈಶ್ವರನ ಜೊತೆ ಮದುವೆ ಮಾಡಿಕೊಂಡ ಬಾಲಕಿಗೆ ಇಂದು 17 ವರ್ಷ ಹೀಗಾಗಿ ಈಶ್ವರನ ವಿರುದ್ಧ ಪೋಸ್ಕೋ ಪ್ರಕರಣದಡಿ ಕಾಕತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ