ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬೆಳಗಾವಿ ದಲಿತ ಸಂಘಟನೆಗಳ ಆಕ್ರೋಶ.

ಬೆಳಗಾವಿ- ಮಹಾರಾಷ್ಟ್ರದ ಭೀಮಾ ಕೋರೆಗಾಂವ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಗಲಾಟೆಯನ್ನು ಖಂಡಿಸಿ ಬೆಳಗಾವಿಯ ವಿವಿಧ ದಲಿತಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಬೀದಿಗಳಿದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯೆಕ್ತಪಡಿಸಿದರು

ಬೀಮಾ ಕೋರೆಗಾಂವ ಗ್ರಾಮದಲ್ಲಿ ಲಕ್ಷಾಂತರ ಜನ ದಲಿತ ಬಾಂಧವರು ವಿಜಯೋತ್ಸವ ಆಚರಿಸುವ ಸಂಧರ್ಭದಲ್ಲಿ ಮತೀಯ ಶಕ್ತಿಗಳು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿ ಪುಂಡಾಟಿಕೆ ಪ್ರದರ್ಶಿಸಿದ್ದು ಕೂಡಲೇ ಸಮಾಜ ಕಂಟಕರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು

ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರ ಪೋಲೀಸ್ ಹಾಗು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯೆಕ್ತಪಡಿಸಿದ ಪ್ರತಿಭಟನಾ ಕಾರರು ಬೀಮಾ ಕೋರೆಗಾಂವ ದಲ್ಲಿ ದಲಿತ ಬಂಧುಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು

ಕೆಡಿ ಮಂತ್ರೇಶಿ,ಎಂ ಆರ್ ಕಲ್ಪತ್ರಿ,ಮಲ್ಲೇಶ ಚೌಗಲೆ , ಗಜು ಧರನಾಯಕ,ಸಧಾ ಕೋಲಕಾರ,ದುರ್ಗೇಶ ಮೇತ್ರಿ ತಾನಾಜಿ ದೇವರಮನಿ,ಸೇರಿದಂತೆ ಹಲವಾರು ಜನ ದಲಿತ ಮುಖಂಡರು ಭಾಗವಹಿಸಿದ್ದರು

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *