Breaking News

ಇಪ್ಪತ್ತು ಲಕ್ಷ ರೂ ಮೌಲ್ಯದ ಆಫೀಮು ಜಪ್ತು ಮೂವರ ಅರೆಸ್ಟ್….

ಬೆಳಗಾವಿ-ಗಾಂಜಾ,ಮಟಕಾ,ಜೂಜಾಟದ ವಿರುದ್ಧ ಸಮರವನ್ನೇ ಸಾರಿರುವ ಬೆಳಗಾವಿ ಪೋಲೀಸರು ಇಂದು ಮತ್ತೊಂದು ಮಹತ್ವದ ದಾಳಿ ಮಾಡುವ ಮೂಲಕ ಅಪಾರ ಪ್ರಮಾಣದ ಆಫೀಮು ವಶಪಡಿಸಿಕೊಂಡಿದ್ದಾರೆ

ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ ಬೆಳಗಾವಿಯಲ್ಲಿ ನಿರಂತರವಾಗಿ ಮಟಕಾ ಜೂಜಾಟ,ಮತ್ತು ಗಾಂಜಾ ಮಾರಾಟದ ಅಡ್ಡೆಗಳ ಮೇಲೆ ದಾಳಿ ನಡೆಯುತ್ತಿದೆ. ಇವತ್ತು ಸೈಬರ್ ಕ್ರೈಂ ವಿಭಾಗದ ಪೋಲೀಸರು ದಾಳಿ ಮಾಡಿ ಒಂದು ಕೆ.ಜಿಗೂ ಹೆಚ್ಚು ಆಫೀಮು ಜಪ್ತು ಮಾಡಿದ್ದು ಇದರ ಮೌಲ್ಯ ಅಂದಾಜು ಇಪ್ಪತ್ತು ಲಕ್ಷಕ್ಕೂ ಹೆಚ್ಚಾಗುತ್ತದೆ.ಈ ದಾಳಿಯ ಮೂಲಕ ಈಗ ಪೋಲೀಸರು ಮಾದಕ ವಸ್ತುಗಳ ಮಾರಾಟದ ವಿರುದ್ಧವೂ ಸಮರ ಸಾರಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಡಿಸಿಪಿ ವಿಕ್ರಂ ಅಮಟೆ ಬೆಳಗಾವಿಯ ಹೊನಗಾ ಮತ್ತು ಚನ್ನಮ್ಮ ನಗರ ಪ್ರದೇಶಗಳಲ್ಲಿ ದಾಳಿ ಮಾಡಿ ಒಂದು ಕೆ.ಜಿಗೂ ಹೆಚ್ವು ಆಫೀಮು ವಶಪಡಿಸಿಕೊಳ್ಳಲಾಗಿದ್ದು,ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಆಫೀಮು ಸಿಕ್ಕಿದ್ದು ಎಲ್ಲಿ..ಹೇಗೆ..?

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ ಬಿ.ಆರ್‌.ಗಡ್ಡೇಕರ
ನೇತ್ರತ್ವದ ತಂಡವು, ಖಚಿತ ಮಾಹಿತಿ ಆಧಾರದ ಮೇಲೆ ಹೊನಗಾ ಗ್ರಾಮದ
ಪಕ್ಕದಲ್ಲಿರುವ ರಾಜಸ್ತಾನ ದಾಬಾದಲ್ಲಿ ಇರುವ ಪಾನಶಾಪ್‌ದಲ್ಲಿ ಹಾಗೂ ಬೆಳಗಾವಿ ಚನ್ನಮ್ಮ ನಗರ ದಲ್ಲಿ ದಾಳಿ ಮಾಡಿ ಆರೋಪಿತರಾದ
1) ಬರಕತ್‌ಖಾನ್ ತಂದೆ ಎಲ್ಲಾಖಾನ್ ವಯಸ್ಸು 30 ವರ್ಷ ವೃತ್ತಿ ಪಾನ್ ಶಾಪ್ ಹಾಲಿ ರಾಜಸ್ತಾನ ದಾಭಾ
ಹತ್ತಿರ ಇರುವ ಜೋಗಾನಟ್ಟಿ ಗ್ರಾಮ್ ತಾ: ಬೆಳಗಾವಿ

2) ಕಮಲೇಶ ಸುರಜನರಾಮ್ ಬೆನಿವಾಲಾ ವಯಸ್ಸು 25 ವರ್ಷ ಸಾ: ಗೋಕುಲ ರೋಡ ಮುರಾರ್ಜಿ ನಗರ ಹುಬ್ಬಳ್ಳಿ

3) ಸರವನ್ @ ಸಾವರಾರಾಮ ತಂದೆ ಅಶುರಾಮ್ ಅಸನೊಣ ವಯಸ್ಸು 21 ವರ್ಷ ವೃತ್ತಿ ಸ್ಟೀಲ್
ಶ್ರೀಲ್ (ಪ್ಯಾಕೇಶನ್) ಸಾ: ಹಾಲಿ ಚೆನ್ನಮ್ಮಾ ನಗರ ಇವರನ್ನು ಬಂಧಿಸಿ ಆರೋಪಿತರ ವಶದಲ್ಲಿಂದ ಒಟ್ಟು 1 ಕೆ.ಜಿ 15 ಗ್ರಾಂ ತೂಕದ
ಅಫಿಮು ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದು ಈ ಅಫೀಮು ಮಾದಕ ವಸ್ತುವಿನ ಅಂತರಾಷ್ಟ್ರೀಯ
ಮಾರುಕಟ್ಟೆಯ ಬೆಲೆ ಸುಮಾರು ರೂ 20,00,000/-( 20 ಲಕ್ಷ ರೂ) ಆಗುತ್ತದೆ.
ಈ ಕುರಿತು ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಸಂಖ್ಯೆ
05/2021 ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಕಾರ್ಯಾಚರಣೆಯಲ್ಲಿ ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್
ಇನ್ಸಪೆಕ್ಟರ್ ಬಿ.ಆರ್.ಗಡ್ಡೇಕರ ಮತ್ತು ಅವರ ಅಧಿಕಾರಿ ಮತ್ತು ಸಿಬ್ಬಂದಿ ಜನರು ಭಾಗವಹಿಸಿದ್ದರು.

ಈ ಕಾರ್ಯವನ್ನು ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರು ಶ್ಲಾಘಿಸಿ ತಂಡಕ್ಕೆ ಬಹುಮಾನವನ್ನು
ಘೋಷಿಸಿರುತ್ತಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *