ಬೆಳಗಾವಿ-ಸರಕಾರದ ನಿರ್ಲಕ್ಷ್ಯದಿಂದ ಇಂದು ಸಾರಿಗೆ ಮುಷ್ಕರ ನಡೆಯುತ್ತಿದೆ,ಗೊಂದಲಮಯ ವಾತಾವರಣ ಸೃಷ್ಠಿಯಾಗೋಕೆ ರಾಜ್ಯ ಸರಕಾರವೇ ಕಾರಣ ಎಂದು,ಬೆಳಗಾವಿಯಲ್ಲಿ ಕಾಂಗ್ರೆಸ್ ಮುಖಂಡ ಎಚ್ ಕೆ ಪಾಟೀಲ ಆರೋಪಿಸಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿದ ಅವರು,ಭರವಸೆ ಉಳಿಸಿಕೊಳ್ಳುವ ಹಾಗೂ ಭರಸವೆ ಈಡೇರಿಸುವ ಶಕ್ತಿ ಸರ್ಕಾರಕ್ಕಿಲ್ಲ,ಸಾರಿಗೆ ನೌಕರರಲ್ಲಿ ಭಯ ಹುಟ್ಟಿಸುವ ವಾತಾವರಣ ನಿರ್ಮಾಣ ಆಗಬಾರದು,ನೌಕರರ ಮುಷ್ಕರ ಬಗೆಹರಿಸುವ ಕೆಲಸ ಬೇಗ ಆಗಬೇಕು ಎಂದರು.
ಮೂರು ತಿಂಗಳ ಹಿಂದೆಯೇ ಸಾರಿಗೆ ನೌಕರರ ಸಮಸ್ಯೆ ಬಂದಿತ್ತು, ಈಗ ಮುಷ್ಕರ ಬಂದಾಗ ಸರಕಾರ ಎಚ್ಚೆತ್ತುಕೊಳ್ಳುತ್ತಿದೆ, ಅವಶ್ಯ ಬಿದ್ದರೆ ವಿರೋಧ ಪಕ್ಷದವರನ್ನ ಕರೆದು ಸಭೆ ನಡೆಸಿ, ಖಾಸಗಿ ಬಸ್ ಬಳಿಸಿ ಎಷ್ಟು ದಿನ ಸಂಸ್ಥೆ ಬಂದ್ ಮಾಡಿಸ್ತೀರಿ,ಎಂದು ಹೆಚ್ ಕೆ ಪಾಟೀಲ್ ಸರಕಾರದ ವಿರುದ್ದ ಹರಿಹಾಯ್ದರು.
ದೇಶದಲ್ಲಿ ತೈಲಬೆಲೆ,ಹೆಚ್ಚಾಗಿದೆ,ಅಗತ್ಯ ವಸ್ತುಗಳ ಬೆಲೆ,ಗೊಬ್ಬರದ ಬೆಲೆ ಗಗನಕ್ಕೇರಿವೆ,ಕೇಂದ್ರ ಸರ್ಕಾರ ಕೇವಲ 7 ವರ್ಷದ ಅವಧಿಯಲ್ಲಿ 135 ಲಕ್ಷ ಕೋಟಿ ಸಾಲ ಮಾಡಿದ್ದು ದೇಶದಲ್ಲಿ ಬಿಜೆಪಿ ವಿರೋಧಿ ಅಲೆ ಇರುವದು ಸ್ಪಷ್ಟವಾಗಿ ಕಾಣಿಸುತ್ತಿದೆ.ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು,ಆಯಾ ಕ್ಷೇತ್ರದ ಮತದಾರರು,ಕಾಂಗ್ರೆಸ್ ಅಭ್ಯರ್ಥಿಗಳನ್ನು,ಒಪ್ಪಿದ್ದಾರೆ,ಜೊತೆಗೆ ಮೆಚ್ಚಿದ್ದಾರೆ,ಈ ಬಾರಿಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲೋದು ಖಚಿತವಾಗಿದೆ ಎಂದು ಕಾಂಗ್ರೆಸ್ ಮುಖಂಡ ಹೆಚ್ ಕೆ ಪಾಟೀಲ ವಿಶ್ವಾಸ ವ್ಯೆಕ್ತಪಡಿಸಿದರು.