ಬೆಳಗಾವಿ,- ಬೆಳಗಾವಿಯ ಆಂಜನೇಯ ನಗರದಲ್ಲಿ ಮಗನೊಬ್ನ ತನ್ನ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ
ಆಂಜನೇಯ ನಗರದ ನಿವಾಸಿ 70 ವರ್ಷದ ಉಮಾಕಾಂತ ದಂಡಾವತಿಮಠ ಹತ್ಯೆಯಾದ ದುರ್ದೈವಿಯಾಗಿದ್ದಾರೆ
ಬೈಲಹೊಂಗದಲ್ಲಿ ದಿನವಿಡೀ ಆಸ್ಪತ್ರೆಯಲ್ಲಿ ಸೇವೆ ಮಾಡಿ ರಾತ್ರಿ ಬೆಳಗಾವಿಗೆ ಬರುತ್ತಿದ್ದ ಡಾ ಉಮಾಕಾಂತ್ ನಿನ್ನೆ ರಾತ್ರಿ ಬೈಲಹೊಂಗಲದಿಂದ ಬೆಳಗಾವಿಗೆ ಬಂದ ನಂತರ ಮಗ ರವಿ ತಂದೆಯ ಜೊತೆಗೆ ಜಗಳಾಡಿದ್ದ ಎಂದು ಹೇಳಲಾಗಿದೆ
ರಾಡ್ ನಿಂದ ಹಲ್ಲೆ ಮಾಡಿದ ರವಿ ಎಪ್ಪತ್ತು ವರ್ಷದ ತನ್ನ ತಂದೆಯನ್ನು ಬಾರದ ಲೋಕಕ್ಕೆ ಕಳುಹಿಸಿದ್ದಾನೆ
ಕೊಲೆಗೆ ಕಾರಣ ಏನು ಅನ್ನೋದು ಇನ್ನುವರೆಗೆ ಸ್ಪಷ್ಠವಾಗಿಲ್ಲ ಸ್ಥಳಕ್ಕೆ ದೌಡಾಯಿಸಿರುವ ಮಾಳ ಮಾರುತಿ ಪೋಲೀಸರು ತನಿಖೆ ಮುಂದುವರೆಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ