ಬೆಳಗಾವಿ- ವಿವಾಹ ವಿಚ್ಛೇದನ ಕುರಿತು ವಿಚಾರಣೆಗಾಗಿ ಕೋರ್ಟಿಗೆ ಬಂದಿದ್ದ ಪತ್ನಿಯ ಮೇಲೆ ಕೋರ್ಟ್ ಆವರಣದಲ್ಲೇ ಪತಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೈಲಹೊಂಗಲದಲ್ಲಿ ನಡೆದಿದೆ.
ಮಾಜಿ ಸೈನಿಕನೊಬ್ಬ ತನ್ನ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬೆಚ್ಚಿ ಬೀಳಿಸುವ ಘಟನೆ ಬೈಲಹೊಂಗಲ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ನಡೆದಿದೆ.ಬೈಲಹೊಂಗಲ ತಾಲೂಕಿನ ನನಗುಂಡಿಕೊಪ್ಪದ ಗ್ರಾಮದ ನಿವೃತ್ತ ಸೈನಿಕ ಶಿವಾನಂದ ಅಡಕಿ ಮತ್ತು ಆತನ ಪತ್ನಿ ಜಯಮಾಲಾ ವ್ಯಾಜ್ಯದ ವಿಚಾರಣೆ ಇಂದು ಕೋರ್ಟನಲ್ಲಿ ನಡೆಯುತ್ತಿತ್ತು. ವಿಚಾರಣೆ ಮುಗಿದ ನಂತರ ಪತ್ನಿ ಜಯಮಾಲಾಗೆ ಪತಿ ಗಂಡ ಶಿವಾನಂದ ಅಡಕಿ ಕೋಯ್ತಾದಿಂದ ತಲೆಗೆ, ಕೈ ಮತ್ತು ಕಾಲಿಗೆ ಭೀಕರವಾಗಿ ಹಲ್ಲೆ ಮಾಡಿದ್ದಾನೆ.
ಪತಿಯ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ