ಪೋಲೀಸ್ ಕಾನ್ ಸ್ಟೇಬಲ್ ನನ್ನು ಪೋಲೀಸರೇ ಬಂಧಿಸಿದ್ದು ಯ್ಯಾಕೆ ಗೊತ್ತಾ…
ಬೆಳಗಾವಿ-ನಗರದ ಮಾರ್ಕೆಟ್ ಯಾರ್ಡ ಬಳಿ ಆಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಪೋಲೀಸ್ ಕಾನ್ಸ್‌ಟೇಬಲ್ ನೊಬ್ಬ ಪೋಲೀಸರ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ
ನಗರದ ಮಾರ್ಕೇಟ್ ಯಾರ್ಡ ಬಳಿ ವಿವಿಧ ಕಂಪನಿಗಳ ಸರಾಯಿ ಬಾಟಲ್ ಗಳನ್ನು ಮಾರಾಟ ಮಾಡುತ್ತಿರುವಾಗ ಎಪಿಎಂಸಿ ಮತ್ತು ಸಿಸಿಬಿ ಪೋಲೀಸರು ಜಂಟಿಯಾಗಿ ದಾಳಿ ಮಾಡಿ ಕೆಎಸ್ ಆರ್ ಪಿ ಪೇದೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ
ಕೆ ಎಸ್ ಆರ್ ಪಿ ಯಲ್ಲಿ ಸೇವೆ ಮಾಡುತ್ತಿರುವ ಈ ಪೋಲೀಸ್ ಪೇದೆ ಹಲವಾರು ವರ್ಷಗಳದ ಆಕ್ರಮವಾಗಿ ಸರಾಯಿ ಬಾಟಲ್ ಗಳನ್ನು ಮಾರಾಟ ಮಾಡುತ್ತಿದ್ದ ಹಲವಾರು ಬಾರಿ ದಾಳಿ ಮಾಡಿದಾಗ ಈತನ ಕುಟುಂಬದವರೇ ಸಿಕ್ಕಿ ಬೀಳುತ್ತಿದ್ದರು ಆದರೆ ಇಂದು ನಡೆದ ದಾಳಿಯಲ್ಲಿ ಪೋಲೀಸ್ ಪೇದೆ ಸಿಕ್ಕಿ ಬಿದ್ದರುವದು ಅಚ್ಚರಿಯ ಸಂಗತಿಯಾಗಿದೆ
ಆಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಪೋಲೀಸ್ ಪೇದೆ ಈಗ ಎಪಿಎಂಸಿ ಪೋಲೀಸರ ಅತಿಥಿಯಾಗಿದ್ದಾನೆ
ಪೋಲೀಸ್ ಪೇದೆಯ ಹೆಸರು ತಿಳಿದು ಬಂದಿಲ್ಲ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ