ಬೆಳಗಾವಿ- ಶಶಿಕಲಾ ಜೊಲ್ಲೆ ಮುಜರಾಯಿ ಇಲಾಖೆಯ ಸಚಿವರು ಇವರ ತವರಿನಲ್ಲೇ ಇವರ ಇಲಾಖೆಯ ಇಬ್ಬರು ಲಂಚುಬೋಕರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ ತವರು ಜಿಲ್ಲೆಯಲ್ಲೇ ಮುಜರಾಯಿ ಇಲಾಖೆಯ ಭ್ರಷ್ಟಾಚಾರ ಬಟಾಬಯಲು ಆಗಿದೆ. ಬೆಳಗಾವಿ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ನಡೆಸಿ ಇಬ್ಬರು ಭ್ರಷ್ಟರನ್ನು ಬಂಧಿಸಿದ್ದಾರೆ.
ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮಂಜೂರಾಗಿದ್ದ ಅನುದಾನ ಬಿಡುಗಡೆಗೆ ಲಂಚಕ್ಕೆ ಬೇಡಿಕೆಯಿಟ್ಟ ಇಬ್ಬರು ಅಧಿಕಾರಿಗಳು ಎಸಿಬಿ ಪೋಲೀಸರ ಅತಿಥಿಯಾಗಿದ್ದಾರೆ.
*ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಳಗಾವಿ ಮುಜರಾಯಿ ಇಲಾಖೆ ತಹಶಿಲ್ದಾರ್ ಸೇರಿ ಇಬ್ಬರ ಬಂಧನವಾಗಿದೆ.* ನಿನ್ನೆ ರಾತ್ರಿ ಮುಜರಾಯಿ ತಹಶಿಲ್ದಾರ್ ದಶರಥ್ ಜಾಧವ್, ತಹಶಿಲ್ದಾರ್ ಸಂಬಂಧಿ ಸಂತೋಷ ಕಡೋಲ್ಕರ್ ಇಬ್ಬರನ್ನು ಬಂಧಿಸಲಾಗಿದೆ.
ರಾಮದುರ್ಗದ ಯಕಲಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆಯಾಗಿತ್ತು,ಆರಾಧನಾ ಯೋಜನೆಯಡಿ 4 ಲಕ್ಷ ರೂ. ಅನುದಾನ ಮಂಜೂರಾಗಿತ್ತು,ಮಂಜೂರಾದ ಅನುದಾನದ ಶೇಕಡ 5ರಷ್ಟು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮುಜರಾಯಿ ತಹಶಿಲ್ದಾರ್ ದಶರಥ್ ಜಾಧವ್,ತನ್ನ ಅಳಿಯ ಸಂತೋಷಗೆ ಹಣ ನೀಡುವಂತೆ ತಿಳಿಸಿದ್ದ ಮುಜರಾಯಿ ತಹಶಿಲ್ದಾರ್ ಬ್ರಷ್ಟಾಚಾರ ಬಟಾಬಯಲಾಗಿದೆ.
ಮುಜರಾಯಿ ತಹಶಿಲ್ದಾರ್ ದಶರಥ ಅಳಿಯ ಸಂತೋಷ ಹಾಲಿನ ಡೈರಿಗೆ ತೆರಳಿ ಲಂಚ ನೀಡುವಂತೆ ತಿಳಿಸಿದ್ದ,ಈ ಕುರಿತು ಎಸಿಬಿಗೆ ದೂರು ನೀಡಿದ್ದ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಸುಭಾಷ್ ಗೋಡಕೆ,ನಿನ್ನೆ ರಾತ್ರಿ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾನೆ.
ಎಸಿಬಿ ಎಸ್‌ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿತ್ತು
ಎಸಿಬಿ ಡಿವೈಎಸ್‌ಪಿ ಕರುಣಾಕಾರ್ ಶೆಟ್ಟಿ ನೇತೃತ್ವದಲ್ಲಿ ದಾಳಿ ಮಾಡಿ ಬೆಳಗಾವಿಯಲ್ಲಿ ತಡರಾತ್ರಿ ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ ಎಸಿಬಿ ಟೀಮ್ ದಾಳಿ ಯಶಸ್ವಿಗೊಳಿಸಿದೆ.