ಬೆಂಗಳೂರು : ಹಿಜಾಬ್‌ಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಕೆಲವು ಮುಸ್ಲಿಂ ಸಂಘಟನೆಗಳು, ಆಕ್ರೋಶ ಹೊರ ಹಾಕಿದ್ದು ಅಮೀರ್-ಎ-ಶರಿಯತ್ ನಾಳೆ, ಮಾರ್ಚ್ 17 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ.
ಕೋರ್ಟ್ ತೀರ್ಪು ನಿರಾಶಾದಾಯಕವಾಗಿದ್ದು, ನಾಳೆ ಶಾಂತಿಯುತವಾಗಿ ಬಂದ್ ನಡೆಸಬೇಕು ಎಂದು ಅಮೀರ್-ಇ-ಶರಿಯತ್ ಮುಖಂಡ ಮೌಲಾನಾ ಸಗೀರ್ ಅಹಮದ್ ಕರೆ ನೀಡಿದ್ದಾರೆ.
ಬಲವಂತದ ಬಂದ್ ಆಗಲಿ, ಜಾಥಾ , ಮೆರವಣಿಗೆ ಆಗಲಿ ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ.
”ಹಿಜಾಬ್ ಧರಿಸಿವುದು ಇಸ್ಲಾಂ ನ ಅತ್ಯಗತ್ಯ ಭಾಗವಲ್ಲ. ಸಮವಸ್ತ್ರ ಸಂಹಿತೆ ಕುರಿತಾಗಿ ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ, ಇದನ್ನು ಪ್ರಶ್ನಿಸುವಂತಿಲ್ಲ” ಎಂದು ಹೈಕೋರ್ಟ್ ತೀರ್ಪು ನೀಡಿತ್ತು
ನಾಳೆ ಗುರುವಾರ ಶಾಂತಿಯುತವಾಗಿ ಕರ್ನಾಟಕ ಬಂದ್ ಮಾಡಿ ಪ್ರತಿಭಟಿಸಿ,ಮುಸ್ಲಿಂ ಸಂಘಟನೆಗಳು ಹಿಜಾಬ್ ಇಸ್ಲಾಂ ಧರ್ಮದ ಪ್ರಮುಖ ಆಚರಣೆ ಎಂದು ಸರ್ಕಾರದ ಗಮನ ಸೆಳೆಯಲಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ