Breaking News

ಕ್ಯಾಮರಾ ಇಲ್ಲದ ಜೈಲಿನಿಂದ ಪರಾರಿಯಾದ ಖೈದಿ…

ಬೈಲಹೊಂಗಲ- ಮುರಗೋಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆಯತ್ನ ಪ್ರಕರಣದಲ್ಲಿ ಬಂಧಿಸಲಾದ ವಿಚಾರಣಾಧೀನ ಖೈದಿ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ ಖಾದಿರಸಾಬ ಮದಾರಸಾಬ ರಾಜೇಖಾನ (೩೪) ಬುಧವಾರ ಮಧ್ಯಾಹ್ನ ಬೈಲಹೊಂಗಲ ಸಬ್ ಜೈಲ್ ದಿಂದ ಪರಾರಿಯಾದ ಘಟಣೆ ನಡೆದಿದೆ.
ಕಳೆದ ೧೫ ದಿನಗಳ ಹಿಂದೆ ಕೊಲೆ ಪ್ರಕರಣದಲ್ಲಿ ಈತನನ್ನು ಬಂಧಿಸಿ, ಕಾರಾಗ್ರಹದಲ್ಲಿ ಇಡಲಾಗಿತ್ತು. ಈತನ ಮೇಲೆ ಮುರಗೋಡ ಠಾಣೆಯಲ್ಲಿ ಜಾತಿ ನಿಂದನೆ, ದೊಂಬಿ, ಸೇರಿ ಆರು ಪ್ರಕರಣಗಳು ದಾಖಲಾಗಿವೆ. ರೌಡಿ ಶೀಟರ್ ಆಗಿರುವ ಈತನ ಪರಾರಿಯಾದ ಘಟಣೆಯಿಂದ ಜೈಲು ಸಿಬ್ಬಂದಿಯ ಕರ್ತವ್ಯ ನಿರ್ಲಕ್ಷ ಎದ್ದು ತೊರುತ್ತಿದೆ.

ಹಾಡು ಹಗಲೆ ಪರಾರಿ- ಸಬಜೈಲ ನವೀಕರಣದ ಹಿನ್ನಲೆಯಲ್ಲಿ ಇಲ್ಲಿಯ ಕೈದಿಗಳನ್ನು ಬೆಳಗಾವಿ ಹಿಂಡಲಗಾಕ್ಕೆ ಕಳಿಸಲಾಗುತ್ತಿತ್ತು. ಇತ್ತಿಚೆಗೆ ಕೈದಿಗಳನ್ನು ಇಲ್ಲಿ ಇರಿಸಲಾಗುತ್ತಿದ್ದು, ಸುಸಜ್ಜಿತವಾz ಎತ್ತರವಾದ ಆವರಣಗೊಡೆ, ಗೇಟ್ ಇದ್ದಾಗಿಯೂ ಕೊಲೆ ಪ್ರಕರಣದ ಅಪರಾಧಿ ಕೈದಿಯು ಹಾಡು ಹಗಲೇ ಮುಖ್ಯ ದ್ವಾರದಿಂದ ಪರಾರಿಯಾಗಿದ್ದು ಅಚ್ಚರಿ ಮೂಡಿಸುತ್ತಿದ್ದು, ಕೈದಿಗಳನ್ನು ತಿರುಗಾಡಲು ಬಿಟ್ಟಾಗ, ಮುಖ್ಯ ದ್ವಾರದ ಬಳಿಯ ಟೇಬಲ ಮೇಲಿದ್ದ ಕೀಲಿಯ ಚಾವಿ ಬಳಸಿ ಈತನು ಪರಾರಿಯಾಗಿದ್ದಾನೆಂದು ತಿಳಿದು ಬಂದಿದ್ದು, ಬೈಲಹೊಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಪಿಐ ಉಳವಪ್ಪ ಸಾತೆನಹಳ್ಳಿ ನೇತೃತ್ವದಲ್ಲಿ ತನಿಖೆ ನಡೆಸಿದ್ದಾರೆ. ಹೆಚ್ಚುವರಿ ಎಸ್‌ಪಿ ಮಾನಿಂಗ ನಂದಗಾAವಿ ಭೇಟಿ ನೀಡಿ ಪರಿಶೀಲಿಸಿದರು.
————————————-
ಕಳೆದ ೧೫ ದಿನಗಳ ಹಿಂದೆ ಕೊಲೆ ಪ್ರಕರಣದ ಕೈದಿಯನು ಸಬ ಜೈಲಿನಲ್ಲಿ ಇರಿಸಲಾಗಿತ್ತು. ಬುಧವಾರ ಮಧ್ಯಾಹ್ನ ಆತನು ಪರಾರಿಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದು, ಜೈಲಿನಲ್ಲಿ ಯಾವುದೇ ಸಿಸಿ ಕ್ಯಾಮೇರಾ ಅಳವಡಿಸಿಲ್ಲ.
—ದೇವೆಂದ್ರ ಆರ್. ಖೋಣಿ ಪ್ರಭಾರಿ ಜೈಲರ್

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *