ಬೆಳಗಾವಿ ನಗರದ ಅಂಗಡಿ ಹಾಗೂ ಮನೆ ಕರಗಳನ್ನು ಹೆಚ್ಚಿಸಬಾರದೆಂದು ಶಾಸಕ ಅನಿಲ ಬೆನಕೆ ಒತ್ತಾಯ :
ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಮಹಾನಗರ ಪಾಲಿಕೆಯು ಇತ್ತಿಚೆಗೆ ಅಂಗಡಿ ಹಾಗೂ ಮನೆಗಳ ಕರಗಳನ್ನು ಈ ಹಿಂದಿನಗಿಂತಲು 3 ರಿಂದ 5 ಪಟ್ಟು ಹೆಚ್ಚು ಮಾಡಿರುವ ವಿಷಯ ತಿಳಿದ ಅವರು ಇಂದು ಮಹಾನಗರ ಪಾಲಿಕೆ ಆಯುಕ್ತರನ್ನು ಬೇಟಿ ಮಾಡಿ 2 ರಿಂದ 3 ವರ್ಷಗಳ ಕಾಲ ಅತೀವೃಷ್ಟಿ ಹಾಗೂ ಕೋರೋನಾ ಮಹಾಮಾರಿಯಿಂದ ಸಾರ್ವಜನಿಕರು ನಷ್ಠದಲ್ಲಿದ್ದು, ಯಾವುದೇ ಆದಾಯ ಮೂಲಗಳಿಲ್ಲದಿರುವುದರಿಂದ ಹೆಚ್ಚಿಸಿರುವ ಕರಗಳನ್ನು ರದ್ದುಪಡಿಸಿ ಈ ಹಿಂದೆ ಇರುವ ಕರಗಳನ್ನೆ ಮುಂದುವರೆಸುವಂತೆ ಪತ್ರವನ್ನು ನೀಡುವ ಮೂಲಕ ತಿಳಿಸಿದರು. ಇದರ ಕುರಿತು ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಗರಾಭಿವೃಧ್ಧಿ ಸಚಿವರ ಗಮನಕ್ಕೆ ತಂದು ಹೊಸದಾಗಿ ಘೋಷಿಸಿರುವ ಕರಗಳನ್ನು ಯಾವುದೇ ಕಾರಣಕ್ಕೂ ಮುಂದುವರೆಸದಂತೆ ರದ್ದುಪಡಿಸಿ ಮೊದಲಿನ ಕರಗಳನ್ನು ಮುಂದುವರೆಸಲು ಮನವಿ ಸಲ್ಲಿಸಿ ಒತ್ತಾಯಿಸಲಾಗುವುದೆಂದರು. ಇದರ ಕುರಿತು ಸಾರ್ವಜನಿಕರು ತಲೆಕೆಡಿಸಿಕೊಳ್ಳದಿರುವಂತೆ ಮನವಿ ಮಾಡಿದು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹಾಗೂ ಇತರರು ಉಪಸ್ಥಿತರಿದ್ದರು
Check Also
ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ
ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …