ಮನೆಗಳು ರೆಡಿ ಆಶ್ರಯ ನೀಡಲು ಇವ್ರಿಗೇನು ಧಾಡಿ…..!!!!

ಬೆಳಗಾವಿ

ಶ್ರೀನಗರ ಉದ್ಯಾನವದ ಜೋಪಡಪಟ್ಟಿಯ ಪಕ್ಕದಲ್ಲಿ ನಿರ್ಮಾಣವಾಗಿರುವ ರಾಜೀವಗಾಂಧಿ ಆವಾಸ್ ಯೋಜನೆಯಡಿಯಲ್ಲಿ ಮನೆಗಳು ನಿರ್ಮಾಣವಾಗಿದ್ದು ಅಲೆಮಾರಿ ಸಮುದಾಯದವರಿಗೆ ನೀಡುವಂತೆ ಆಗ್ರಹಿಸಿ ಬುಧವಾರ ಅಖಿಲ ಕರ್ನಾಟಕ ಅಲೆಮಾರಿ ಸಮುದಾಯದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು .

ಕಳೆದ 30 ವರ್ಷದಿಂದ ಶ್ರೀನಗರದ ಜೋಪಡಪಟ್ಟಿಯಲ್ಲಿ ವಾಸ ಮಾಡುತ್ತಿದ್ದೇವೆ. ಸರಕಾರ ಅಲೆಮಾರಿ ಜನಾಂಗದವರಿಗಾಗಿ 2015ರಲ್ಲಿ ಕಟ್ಟಡ ನಿರ್ಮಿಸಿದ್ದಾರೆ. ಸ್ಥಳೀಯ ಶಾಸಕರ ಹಸ್ತಕ್ಷೇಪದಿಂದ ನಮಗೆ ಹಸ್ತಾಂತರವಾಗಬೇಕಿದ್ದ ಮನೆಗಳು ಇಲ್ಲಿಯವರೆಗೂ ಹಂಚಿಕೆ ಮಾಡದೆ ಅನ್ಯಾಯ ಮಾಡಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ‌.
ಜೋಪಡಪಟ್ಟಿಯಲ್ಲಿ 150 ಕುಟುಂಬದವರು ವಾಸ ಮಾಡುತ್ತಿದ್ದಾರೆ. ಆದರೆ ಹಿಂದಿನ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ 91 ಕುಟುಂಬಕ್ಕೆ ಮಾತ್ರ ಆಯ್ಕೆ‌ಮಾಡಿದ್ದಾರೆ. ಕೂಡಲೇ ಇಲ್ಲಿ ವಾಸಿಸುವ ಎಲ್ಲ ಅಲೆಮಾರಿ ಜನಾಂಗದವರಿಗೆ ಮನೆಗಳನ್ನು ಹಂಚಿಕೆ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಹನುಮಂತ ತಿಕ್ಕೋಳ, ಮಲ್ಲೇಶ ತಳವಾರ, ಭೀಮಪ್ಪ ತಳವಾರ, ಯಲ್ಲಪ್ಪ ಮಾದರ, ನಿಂಗವ್ವ ಹಳವರ, ಇಂದ್ರವ್ವ ಹಳವರ, ಗಂಗವ್ವ ಹಳವರ, ರೇಣುಕಾ ಹಳವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *