ವಿಧ್ಯಾರ್ಥಿಗೆ ಶಿಕ್ಷಕಿಯಿಂದ ಥಳಿತ ಶಾಲೆಗೆ ನೂರಾರು ಪಾಲಕರ ಮುತ್ತಿಗೆ

ಬೆಳಗಾವಿ- ಶಾಲೆಯ ಶಿಕ್ಷಕಿಯೊಬ್ಬಳು ವಿಧ್ಯಾರ್ಥಿಗೆ ಮನಬಂದಂತೆ ಥಳಿಸಿ ಕಾಲಿನ ಮೇಲೆ ಬರೆ ಎಳೆದಿರುವದನ್ನು ವಿರೋಧಿಸಿ ನೂರಾರು ಜನ ಪಾಲಕರು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಬೆಳಗಾವಿಯ ವಡಗಾಂವ ಪ್ರದೇಶದಲ್ಲಿ ನಡೆದಿದೆ

ವಡಗಾಂವಿ ಶಾಲೆ ನಂ 3 ರ ಶಾಲೆಯಲ್ಲಿ ಈ ಘಟನೆ ನಡೆದಿದೆ ಶಾಲೆಯ ಶಿಕ್ಷಕಿ ಎಸ್ ಆರ್ ಢವಳಿ ವಿಧ್ಯಾರ್ಥಿಯೊಬ್ಬನಿಗೆ ಮನಬಂದಂತೆ ಥಳಿಸಿದ ಪರಿಣಾಮ ಆತನ ಕಾಲಿಗೆ ಗಾಯವಾಗಿದೆ ಇದನ್ನು ಖಂಡಿಸಿ ಶಾಲೆಗೆ ಮುತ್ತಿಗೆ ಹಾಕಿದ ಪಾಲಕರು ಶಿಕ್ಷಕಿಯನ್ನು ಅಮಾನತು ಮಾಡುವಂತೆ ಆಗ್ರಹಿಸುತ್ತಿರುವ ಸುದ್ದಿ ಹರಡಿ ಇತರ ಪಾಲಕರು ಶಾಲೆಗೆ ಮುತ್ತಿಗೆ ಹಾಕಿದ್ದಾರೆ

ಎಸ್ ಆರ್ ಢವಳಿ ಎಂಬ ಶಿಕ್ಷಕಿ ತನ್ನ ಮಕ್ಜಳನ್ನು ಶಾಲೆಗೆ ಕರೆತರುತ್ತಾಳೆ ಶಾಲೆಯ ವಿಧ್ಯಾರ್ಥಿಗಳಿಂದ ತಮ್ಮ ಮಕ್ಕಳ ಆರೈಕೆ ಮಾಡಿಸುತ್ತಾಳೆ ಶಾಲೆಯ ವಿಧ್ಯಾರ್ಥಿಗಳ ಮೂಲಕ ತನ್ನ ಮಕ್ಕಳ ಸೂಸು ಸ್ವಚ್ಛ ಮಾಡಿಸುತ್ತಾಳೆ ಎಂದು ಪಾಲಕರು ದೂರಿದ್ದು ಈ ಶಿಕ್ಷಕಿಯನ್ನು ಕೂಡಲೇ ಅಮಾನತು ಮಾಡಬೇಕು ಇಲ್ಲವಾದರೆ ಬೇರೆ ಕಡೆಗೆ ವರ್ಗಾವಣೆ ಮಾಡಬೇಕು ಎಂದು ಪಾಲಕರು ಒತ್ತಾಯಿಸಿದರು

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *