ಬೆಳಗಾವಿ-
ರಾಜ್ಯ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ರೈತರ ಬಹೃತ ಪ್ರತಿಭಟನೆ ನಡೆಯಿತು
ನಗರದ ರೈಲು ನಿಲ್ದಾಣದಿಂದ ಡಿಸಿ ಕಚೇರಿ ವರಗೆ ರ್ಯಾಲಿ ನಡೆಸಿದ ನೂರಾರು ರೈತರು ನಗರದ ಚನ್ನಮ್ಮ ವೃತ್ತದಲ್ಲಿ ಸಮಾವೇಶ ಗೊಂಡರು
ರೈತರ ಸಂಪೂರ್ಣ ಸಾಲಮನ್ನಾ ಸೇರಿ ವಿವಿಧ ಬೇಡಿಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಅವರು
ಮಳೆಯನ್ನೂ ಲೆಕ್ಕಿಸದೇ ಪ್ರತಿಭಟನೆ ಮುಂದುವರೆಸಿದರು
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ನಡೆದ ಪ್ರತಿಭಟನೆಯ ನೇತ್ರತ್ವವನ್ನು ಕೋಡಿಹಳ್ಳಿ ಚಂದ್ರ ಶೇಖರ ವಹಿಸಿದ್ದರು
ಈ ಸಂಧರ್ಭದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ ರೈತರು ಸಾಲ ಮಾಡಿಲ್ಲ ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾಲ ಮಾಡಿದ್ದಾರೆ ಇದು ರೈತರ ಸಾಲವಲ್ಲ ಅವರಿಬ್ಬರೂ ಮಾಡಿದ ಸಾಲ ವಾಗಿದ್ದು ಅದನ್ನು ಅವರೇ ತೀರಿಸಬೇಕು ಎಂದು ಕೋಡಿಹಳ್ಳಿ ಒತ್ತಾಯ ಮಾಡಿದರು
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್ ಟಿ ರೈತರಿಗೆ ಮಾರಕವಾಗಿದೆ ಎಂದು ಕೋಡಿಹಳ್ಳಿ ಆರೋಪಿಸಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ