ಬೆಳಗಾವಿ:
ಸಾಲ ಪಾವತಿಸಿದರೂ ರೈತನ ಜಮೀನು ಹರಾಜಿಗೆ ಮುಂದಾದ ಬೆಳಗಾವಿಯ ಎಚ್ ಡಿ ಎಫ್ ಸಿ ಬ್ಯಾಂಕ್ ವ್ಯವಸ್ಥಾಪಕರ ಕ್ರಮ ಖಂಡಿಸಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಕಾಂಗ್ರೆಸ್ ರಸ್ತೆಯಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ನ ಬೀಗಕ್ಕೆ ಹಸಿರು ಶಾಲು ಜಡಿದು ಪ್ರತಿಭಟನೆ ನಡೆಸಿದ ರೈತರು ಮ್ಯಾನೇಜರ್ ವಿರುದ್ಧ ಘೋಷಣೆ ಕೂಗಿದರು.
ಗೋಕಾಕ ತಾಲೂಕಿನ ಕಳ್ಳಿಗುದ್ದಿ ಗ್ರಾಮದ ರೈತ ಅಪ್ಪಣ್ಣ ತಿಮ್ಮಪ್ಪ ಸಂಕ್ರಿ ಎಂಬುವವರು ೨೦೧೨ ರಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಅಲ್ಲಿ ೯ ಲಕ್ಷ ರೂ.ಸಾಲ ಪಡೆದಿದ್ದರು. ಎರಡು ವರ್ಷದ ಬಳಿಕ ೬ ಲಕ್ಷ ಹಾಗೂ ನಂತರ ೩ ಲಕ್ಷ ರೂ. ಹಣ ಪಾವತಿಸಿದರೂ ಎಚ್ ಡಿ ಎಫ್ ಸಿ ಬ್ಯಾಂಕ್ ವ್ಯವಸ್ಥಾಪಕ ಕರಿಲಿಂಗಪ್ಪನವರ ಅವರು ಕ್ಲೀಯರೆನ್ಸ್ ಪತ್ರ ನೀಡದೇ ಒಂದು ವರ್ಷದಿಂದ ಸತಾಯಿಸಲಾಗುತ್ತಿದೆ ಎಂಬುದು ರೈತರ ಆರೋಪ. ಅಲ್ಲದೇ ಜಮೀನು ಹರಾಜಿಗೆ ಬ್ಯಾಂಕ್ ನಿಂದ ರೈತನ ಮನೆಗೆ ನೋಟಿಸ್ ರವಾನಿಸಲಾಗಿದೆ.
ಈ ನಿರ್ಧಾರ ಪ್ರಶ್ನಿಸಲು ಬ್ಯಾಂಕ್ ಗೆ ಬಂದ ರೈತರಿಗೆ ಮಧ್ಯಾಹ್ನ ಕ್ಲೀಯರೆನ್ಸ್ ಸರ್ಟಿಫಿಕೇಟ್ ನೀಡುವುದಾಗಿ ವ್ಯವಸ್ಥಾಪಕರ
ಭರವಸೆ ನೀಡಿದ್ದಾರೆ. ಮಧ್ಯಾಹ್ನ ಮರಳಿ ಬ್ಯಾಂಕ್ ಗೆ ಆಗಮಿಸಿರುವ ರೈತರಿಗೆ ಕ್ಲೀಯರೆನ್ಸ್ ಸರ್ಟಿಫಿಕೇಟ್ ನೀಡದೇ ವ್ಯವಸ್ಥಾಪಕ ಬ್ಯಾಂಕ್ ನಿಂದ ಕಾಲ್ಕಿತ್ತು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ವ್ಯವಸ್ಥಾಪಕ ಕ್ರಮ ಖಂಡಿಸಿ ರೈತರು ಬ್ಯಾಂಕ್ ನ ಬಾಗಿಲಿಗೆ ಹಸಿರು ಶಾಲು ಜಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಟಿಳಕವಾಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ