ಹೊಲದಲ್ಲಿ ರಾಹುಲ್ ವಿಹಾರ…..ಏನ್ ಸಮಾಚಾರ….!!!

ರಾಜಕೀಯ ಒತ್ತಡಗಳ ನಡುವೆಯೂ ಹೊಲದಲ್ಲಿ ರಾಹುಲ್, ವಿಹಾರ….!!

ಬೆಳಗಾವಿ- ದಿನನಿತ್ಯ ರಾಜಕೀಯ ಚಟುವಟಿಕೆ,ಉದ್ಯಮದ ನಿರ್ವಹಣೆ,ಕಾರ್ಯಕ್ರಮಗಳಲ್ಲಿ ಭಾಗವಹಿಸುವದು,ಯಮಕನಮರ್ಡಿ ಕ್ಷೇತ್ರದಲ್ಲಿ ಫೌಂಡೆಶನ್ ಆಶ್ರಯದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುವದು, ರಾಹುಲ್ ಜಾರಕಿಹೊಳಿ ಅವರ ದಿನಚರಿ,ಆದ್ರೆ ಇವತ್ತು ರಾಹುಲ್ ರಿಲ್ಯಾಕ್ಸ್ ಆಗಿದ್ರು.

ತಂದೆ ಸತೀಶ್ ಜಾರಕಿಹೊಳಿ ಅವರ ಜೊತೆ ರಾಹುಲ್ ಇಂದು ಹೊಲದಲ್ಲಿ ವಿಹಾರ ಮಾಡಿ ಒಕ್ಕಲುತನದ ಸೊಗಡು ನೋಡಿ ಸಂಬ್ರಮಿಸಿದರು. ಇತ್ತೀಚಿಗಷ್ಟೆ ಶಿಕ್ಷಣ ಮುಗಿಸಿ ರಾಜಕೀಯ ಕ್ಷೇತ್ರಕ್ಕೆ ಧುಮುಕಿರುವ ರಾಹುಲ್ ಸಾಮಾಜಿಕ ಚಟುವಟಿಕೆ,ಸೇರಿದಂತೆ ಉಳಿದ ಕ್ಷೇತ್ರಗಳ ಬಗ್ಗೆಯೂ ತುಂಬಾ ಆಸಕ್ತಿಯಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಸತೀಶ್ ಶುಗರ್ಸ್,ಬೆಳಗಾವಿ ಶುಗರ್ಸ್ ಸೇರಿದಂತೆ ಇತರ ಉದ್ಯಮಗಳ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ರಾಹುಲ್ ತಂದೆ ಸತೀಶ್ ಅವರ ಒತ್ತಡ ಕಡಿಮೆ ಮಾಡಿದ್ದಾರೆ.

ಅಲ್ಪಾವಧಿಯಲ್ಲಿ ರಾಜಕೀಯ ಕ್ಷೇತ್ರದಲ್ಲೂ ಓಡಾಡಿ ತಮ್ಮದೇ ಆದ ಛಾಪು ಮೂಡಿಸಿರುವ ರಾಹುಲ್ ಜಾರಕಿಹೊಳಿ, ಕಾಂಗ್ರೆಸ್ ಪಕ್ಷದ ಯುವಪಡೆಯನ್ಬು ಇನ್ನಷ್ಟು ಬಲಿಷ್ಠಗೊಳಿಸುವ ಪ್ರಯತ್ನ ನಡೆಸಿದ್ದಾರೆ.

ನಯ,ವಿನಯ,ಹಿರಿಯರನ್ನು ಗೌರವಿಸಿ,ಚಿಕ್ಕವರನ್ನು ಪ್ರೀತಿಸುವ ಸಂಸ್ಕಾರವನ್ನು ಮೈಗೂಡಿಸಿಕೊಂಡಿರುವ ರಾಹುಲ್,‌ಜಾರಕಿಹೊಳಿ,ರಾಜಕೀಯ,ಸಾಮಾಜಿಕ,ಔದ್ಯೋಗಿಕ, ಮತ್ತು ಸಮಾಜ ಸೇವೆಯಲ್ಲೂ ಸಕ್ರೀಯರಾಗಿರುವ ರಾಹುಲ್ ಇವತ್ತು ಹೊಲದಲ್ಲಿ ವಿಹರಿಸಿ ಅನ್ನದಾತನ ಕಷ್ಟ ಸುಖವನ್ನು ಆಲಿಸಿದರು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *