ಖನಾಪುರ(ಗ್ರಾ): ಕಳೆದೊಂದು ವಾರದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಗೋಡೆ ಕುಸಿದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಜರುಗಿದೆ.
ತಾಲೂಕಿನ ಲಿಂಗನಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚುಂಚವಾಡ ಗ್ರಾಮದ ಅನಂತು ಧರ್ಮೇಂದ್ರ ಪಾಶೆಟ್ಟಿ(15) ಎಂಬ ಯುವಕ ಮೃತಪಟ್ಟಿರುತ್ತಾನೆ.
ತಾವು ವಾಸಿಸುವ ಮನೆಯ ಪಕ್ಕದಲ್ಲಿರುವ ಮನೆಯಲ್ಲಿ ದನ ಕರುಗಳನ್ನು ಕಟ್ಟುತ್ತಿದ್ದರು. ಗುರುವಾರ ರಾತ್ರಿ 10ಗಂಟೆ ಸುಮಾರಿಗೆ ಕೊಟ್ಟಿಗೆಯಲ್ಲಿರುವ ದನ ಕರುಗಳಿಗೆ ಮೇವು ಹಾಕಲು ಹೋದಾಗ ಗೋಡೆ ಏಕಾಏಕಿ ಯುವಕನ ಮೇಲೆ ಕುಸಿದು ಬಿದ್ದಿರುವುದರಿಂದ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿರುತ್ತಾನೆ.
ಸುದ್ದಿ ತಿಳಿದ ತಕ್ಷಣ ರಾತ್ರಿಯೇ ಸ್ಥಳಕ್ಕೆ ನಂದಗಡ ಪೊಲೀಸ್ ಠಾಣೆಯ ಸಿಬ್ಬಂದಿಯವರು ದೌಡಾಯಿಸಿ ಮಾಹಿತಿಯನ್ನು ಸಂಗ್ರಹಿಸಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. ತದನಂತರ ಮೃತ ಯುವಕನ ಪ್ರಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಆಸ್ಪತ್ರೆಗೆ ರವಾನಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
