Breaking News

ಅವರು ಮಾಡಿದ್ದನ್ನು ನೋಡಿ, ಎದಿ ಝಲ್ ಅಂತ್ರೀಪಾ…!!

ಅಣುಕು ಪ್ರದರ್ಶನ
————————–
ಎಲ್.ಪಿ.ಜಿ.ಸ್ಪೋಟ; 87 ಜನರ ರಕ್ಷಣಾ ಕಾರ್ಯಾಚರಣೆಯ ಅಣುಕು ಪ್ರದರ್ಶನ

ಬೆಳಗಾವಿ, –

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ,ಬೆಳಗಾವಿ ರವರು ನೇತ್ರತ್ವದಲ್ಲಿ ಇಂಡಿಯನ್ ಬಾಟಲಿಂಗ್ ಪ್ಲಾಂಟ್ ಕಣಗಲಾ ತಾಲೂಕು ಹುಕ್ಕೇರಿ ಈ ಕಾರ್ಖಾನೆಯಲ್ಲಿ ಅಣಕು ಪ್ರದರ್ಶನವನ್ನು ದಿನಾಂಕ:29.07.2022 ರಂದು ಬೆಳಿಗ್ಗೆ 10.00 ಗಂಟೆಯ ಸಮಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲೆಯಲ್ಲಿ ಅತೀ ಅಪಾಯಕಾರಿ ಕಾರ್ಖಾನೆಯಲ್ಲಿ ಒಂದಾಗಿದ್ದು, ಈ ಕಾರ್ಖಾನೆಯಲ್ಲಿ LPG ಶೇಖರಣೆ ಮಾಡುತ್ತಿದ್ದು ಅವಗಡ ಸಂಭವಿಸಿದಲ್ಲಿ ಅದನ್ನು ನಿಯಂತ್ರಣ ಕ್ಕೆ ತರಲು ಹಾಗೂ ಅದರಿಂದಾಗಿ ಪರಿಣಾಮಗಳನ್ನು ತಗ್ಗಿಸುವ ದೃಷ್ಟಿಯಿಂದ ಜಿಲ್ಲಾ ಪ್ರಾಧಿಕಾರ ತುರ್ತಾಗಿ ಹಾಗೂ ಪರಿಣಾಮಕಾರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಅಣುಕು ಪ್ರದರ್ಶನವನ್ನು ಕೈಗೊಳ್ಳಲಾಯಿತು.

ಕಾರ್ಖಾನೆಯಲ್ಲಿ ಶೇಕರಿಸಲು LPG ಸ್ಪೋಟಕಗೊಂಡಿದ್ದು ಹಾಗೂ ಅದರಿಂದಾಗಿ ಕಾರ್ಖಾನೆಯ ಒಳಗಡೆ ಹಾಗೂ ಕಣಗಲಾ ಗ್ರಾಮದ ನಿವಾಸಿಗಳಿಗೆ ಈ ಒಂದು ಅವಗಡದಲ್ಲಿ ಗಾಯ ಹಾಗೂ ಅವರನ್ನು ಸ್ಥಳಾಂತರಿಸುವ ಸಂಭಾವನೆಗಳು ಇರುವ ಸನ್ನಿವೇಶನ್ನು ಅಣಕು ಪ್ರದರ್ಶನದಲ್ಲಿ ತೆಗೆದುಕೊಂಡ ವಿಪತ್ತು ನಿರ್ವಹಣೆ ಕಾರ್ಯವನ್ನು ಕೈಗೊಳ್ಳಲಾಯಿತು.

ಈ ಸನ್ನಿವೇಶದಲ್ಲಿ ಕಣಗಲಾ ಗ್ರಾಮದಿಂದ ಸುಮಾರು 87 ಜನರನ್ನು ರಕ್ಷಿಸಿ ಅವರನ್ನು ಸಂಕೇಶ್ವರದಲ್ಲಿರುವ ಶಂಕರಲಿಂಗ ಕಲ್ಯಾಣ ಮಂಟಪದಲ್ಲಿ ಸ್ಥಾಪಿಸಿರುವ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಅದೇರೀತಿ ಗಾಯಾಳುಗಳನ್ನು ರಕ್ಷಿಸಿ ವೈದ್ಯಕೀಯ ಪ್ರಥಮ ಚಿಕಿತ್ಸೆಗೆ ಅಂಬೋಲೆನ್ಸ್ ಮೂಲಕ ಕರೆತಂದ ಚಿಕಿತ್ಸೆನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಸಂಕೇಶ್ವರ ಸಮುದಾಯ ಕೇಂದ್ರಕ್ಕೆ ಸ್ಥಳಾಂತರಿಸುವ ಕಾರ್ಯವನ್ನು ತಾಲೂಕು ಆರೋಗ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಯವರು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಅವಗಡ ಸಂಭವಿಸಿದ ಮಾಹಿತಿಬಂದ ತಕ್ಷಣವೇ ಜಿಲ್ಲಾ ಆಡಳಿವು ತಕ್ಷಣವೇ ಕಾರ್ಯಪ್ರವೃತ್ತರಾಗಿ ಘಟನೆ ಸ್ಥಳಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಸೂಚನೆಯನ್ನು ನೀಡಿ ಅವಗಡವನ್ನು ನಿಯಂತ್ರಿಸಲು ತುರ್ತ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಲಾಯಿತು.

ಅದರಂತೆ ಹೊನ್ನಿಹಳ್ಳಿ ವೃತ್ತದಲ್ಲಿ ಇನ್ಸಿಡೆಂಟ್‌ ಕಮ್ಯಾಂಡ್‌ ಪೋಸ್ಟ್ ಸ್ಥಾಪಿಸಿ ಅಲ್ಲಿಂದ ಎಲ್ಲ ಸಂಪನ್ಮೂಲಗಳನ್ನು ಕೃಢೀಕರಿಸಿ , ಅವುಗಳನ್ನು ಬಳಸಿಕೊಂಡು ಘಟನೆ ನಿಯಂತ್ರಣ, ಜನ- ಜಾನುವಾರುಗಳ ರಕ್ಷಣೆ, ಗಾಯಗೊಂಡವರ ರಕ್ಷಣೆ ಎಲ್ಲ ಕಾರ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಯಿತು. ಈ ಅಣಕು ಪ್ರದರ್ಶನಕ್ಕೆ 5 ಎಂಬುಲನ್ಸ್, 2 ಅಗ್ನಿಶಾಮಕ ವಾಹನ, 1 ರಕ್ಷಣಾ ವಾಹನ , SDRF 13 ಸಿಬ್ಬಂದಿ , 25 ಅಗ್ನಿಶಾಮಕ ಸಿಬ್ಬಂದಿ, 25 ಪೋಲಿಸ್,35 ಗೃಹರಕ್ಷಕ ದಳದ ಸಿಬ್ಬಂದಿ, 35 ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಇತರೆ ಅಧಿಕಾರಿಗಳು ಪಾಲ್ಗೊಂಡರು. ಈ ಅಣಕು ಪ್ರದರ್ಶನವನ್ನು ಶ್ರೀ ರವಿಂದ್ರ ಕರಲಿಂಗನವರ ಉಪವಿಭಾಗಾಧಿಕಾರಿಗಳು, ಬೆಳಗಾವಿ ಹಾಗೂ ಶ್ರೀ ವೆಂಕಟೇಶ ರಾಠೋಡ ಕಾರ್ಖಾನೆಯ ಉಪನಿರ್ದೇಶಕರು ,ಬೆಳಗಾವಿ ರವರ ನೇತೃತ್ವದಲ್ಲಿ ಹಾಗೂ ಈ ಕೆಳಕಂಡ ಅಧಿಕಾರಿಗಳ ಸಹಯೋಗದಲ್ಲಿ ಜರುಗಿತು.

ಶಶಿಧರ ಎಸ್ ನಿಲಗರ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು,ಬೆಳಗಾವಿ, ಶ್ರೀ ಅರವಿಂದ ಡೆಪುಟಿ ಕಮಾಂಡಟ್ SDRF, ಬೆಳಗಾವಿ, ಶ್ರೀ ಹೂಗಾರ ತಹಶೀಲ್ದಾರರು, ಹುಕ್ಕೇರಿ, ಡಾ ಕುಡಚಿ ತಾಲೂಕಾ ಆರೋಗ್ಯಾಧಿಕಾರಿಗಳು, ಹುಕ್ಕೇರಿ, ವಿಶಾಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಚಿಕ್ಕೋಡಿ, ಶ್ರೀ ರಮೇಶ್ ಪರಿಸರ ಅಧಿಕಾರಿಗಳು ,ಚಿಕ್ಕೋಡಿ, ಶ್ರೀ ಗಣಪತಿ ಕೂಗನೊಳಿ PSI, ಸಂಕೇಶ್ವರ, ಸಂಜಿವಕುಮಾರ NDRF , ಹರ್ಷಲ್ ಪರಹಾತೆ, ರಕ್ಷಣಾ ಅಧಿಕಾರಿಗಳು, IOCL, ಕಣಗಲಾ, ನಿಂಗನಗೌಡ ಮ ಚನಬಸನಗೌಡರ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು ಉಪಸ್ಥಿತರಿದ್ದರು.
*****

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *