ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಭಾರಿ ವಾಹನಗಳ ಓಡಾಟ ಜಾಸ್ತಿಯಾಗಿದ್ದು,ಇಂದು ಬೆಳ್ಳಗ್ಗೆ ದ್ವಿಚಕ್ರ ವಾಹನಕ್ಕೆ ಮರಳು ತುಂಬಿದ ಲಾರಿಯೊಂದು ಡಿಕ್ಕಿ ಹೊಡೆದು ವಿಧ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಮೃತ ಪಟ್ಟ ಘಟನೆ ಬೆಳಗಾವಿಯ ಫೋರ್ಟ್ ರಸ್ತೆಯಲ್ಲಿ ನಡೆದಿದೆ.
ಸಾದಿಯಾ ಶಬ್ಬೀರ ಅಹ್ಮ ಪಾಳೇಗಾರ 16 ವರ್ಷ ಅಶೋಕ ನಗರ ಬೆಳಗಾವಿ, ಮೃತ ದುರ್ದೈವಿಯಾಗಿದ್ದಾಳೆ.
ಕೃಷ್ಣ ಭಟ್ ಬೆಳಗಾವಿ ಮಹಾನಗರದ ಪೋಲೀಸ್ ಆಯುಕ್ತರಾಗಿದ್ದ ಸಂಧರ್ಭದಲ್ಲಿ ಭಾರಿ ವಾಹನಗಳ ಅಪಘಾತದಲ್ಲಿ ಅನೇಕ ವಿಧ್ಯಾರ್ಥಿಗಳು ಬಲಿಯಾದ ಹಿನ್ನಲೆಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ನಗರದಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದರು.
ಆದ್ರೆ ಕೃಷ್ಣ ಭಟ್ ಬೆಳಗಾಯಿಂದ ವರ್ಗಾವಣೆ ಆದ ಬಳಿಕ ಈ ಆದೇಶ ಪಾಲನೆ ಆಗುತ್ತಿಲ್ಲ.ನಗರದಲ್ಲಿ ಉಸುಕಿನ ಲಾರಿಗಳು,ಟ್ಯಾಂಕರ್ ಗಳು ಸಂಚರಿಸುತ್ತಲೇ ಇವೆ.
ಇಂದು ಬೆಳಗ್ಗೆ ದ್ವಿಚಕ್ರ ವಾಹನದ ಮೇಲೆ ಶಾಲೆಗೆ ಹೊರಟಿದ್ದ ವಿಧ್ಯಾರ್ಥಿನಿ ಉಸುಕು ತುಂಬಿದ ಲಾರಿಗೆ ಬಲಿಯಾಗಿದ್ದಾಳೆ,ಅಪಘಾತ ಸಂಭವಿಸಿದ ಬಳಿಕ ಲಾರಿ ಚಾಲಕ ಅಲ್ಲಿ ಸೇರಿದ್ದ ಸಾರ್ವಜನಿಕರ ಕಣ್ತಪ್ಪಿಸಿ ಠಾಣೆಗೆ ಹಾಜರಾಗಿದ್ದಾನೆ ಎಂದು ತಿಳಿದು ಬಂದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ