ಬೆಳಗಾವಿ- ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆಯಾದ ಘಟನೆ ಬೆಳಗಾವಿ ಸಮೀಪದ ಕೆ.ಕೆ. ಕೊಪ್ಪ ಗ್ರಾಮದಲ್ಲಿ ನಡೆದಿದೆ
ಜನೇವರಿ 19 ರಂದು ಕಾಣೆಯಾಗಿದ್ದ ಮಹಿಳೆ ಮಹಾರಾಷ್ಟ್ರದ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ
ತಾಯವ್ವ ಶಿವಾಜಿ ಕದಮ (60) ಮೃತ ದುರ್ದೈವಿ
ಕೊಲ್ಹಾಪೂರ ಜಿಲ್ಲೆಯ ಮುರಗುಡ ಪೊಲೀಸ್ ಠಾಣಾ ವ್ಯಾಪ್ತಿಯ ವೇದಗಂಗಾ ನದಿಯಲ್ಲಿ ಜ. 24 ರಂದು ಗೋಣಿ ಚೀಲದಲ್ಲಿ ಕೈಕಾಲು ಕಟ್ಟಿದ್ದ ಸ್ಥಿತಿಯಲ್ಲಿ ತಾಯವ್ವಳ ಶವ ಪತ್ತೆಯಾಗಿದೆ
ತರಕಾರಿ ವ್ಯಾಪಾರ ಮಾಡುತ್ತಿದ್ದ ತಾಯವ್ವ ಬೆಳಗಾವಿಗೆ ಹೋದವಳು ಈ ವರೆಗೂ ಹಿಂತಿರುಗಿರಲಿಲ್ಲ.
ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕೊಲೆ ಮಾಡಿ ಗೋಣಿಚೀಲದಲ್ಲಿ ಶವ ಹಾಕಿ ನದಿಯಲ್ಲಿ ಎಸೆಯಲಾಗಿದೆ
ಹಿರೇಬಾಗೇವಾಡಿ ಪೋಲೀಸರು ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಿದ್ದಾರೆ..
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ