ಬೆಳಗಾವಿ-ಇಂದು ಬೆಳಗ್ಗೆ ಚಿರತೆಯೊಂದು ಬೆಳಗಾವಿಯ ವಿವಿಐಪಿ ಬಡಾವಣೆಗೆ ನುಗ್ಗಿದೆ.ಕಟ್ಟಡ ಕಾರ್ಮಿಕನ ಮೇಲೆ ದಾಳಿ ಮಾಡಿರುವ ಚಿರತೆ ಈಗ ನಾಪತ್ತೆಯಾಗಿದೆ.
ಬೆಳಗಾವಿಯ ವಿವಿಐಪಿ ಬಡಾವಣೆ ಎಂದೇ ಕರೆಲ್ಪಡುವ ಹನುಮಾನ ನಗರ,ಜಾಧವ ನಗರದ ಪರಿಸರದಲ್ಲಿ ಚಿರತೆ ನುಗ್ಗಿರುವ ವಿಚಾರ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಕಾರ್ಮಿಕನ ಮೇಲೆ ಅಟ್ಯಾಕ್ ಮಾಡಿರುವ ಚಿರತೆ,ಜಾಧವ ನಗರ ಹನುಮಾನ ನಗರದ ಪ್ರದೇಶದಲ್ಲಿ ಮಾಯವಾಗಿದ್ದು,ಚಿರತೆ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಚಿರತೆ ಕಾಣೆಯಾದ ಪ್ರದೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ,ಮಾಜಿ ಶಾಸಕ ಫಿರೋಜ್ ಸೇಠ,ಅನೀಲ ಪೋತದಾರ, ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಗಣ್ಯಾತಿ ಗಣ್ಯರ ಮನೆಗಳು ಇವೆ.ಹೀಗಾಗಿ ಈ ಚಿರತೆ ಕಾಡಿನಿಂದ ಗಣ್ಯರು ವಾಸಿಸುವ ಬಡವಾಣೆಗೆ ನುಗ್ಗಿರುವದು ವಿಶೇಷ
ಹೀಗಾಗಿ ಅರಣ್ಯ ಇಲಾಖೆ,ಪೋಲೀಸ್ ಇಲಾಖೆ,ಸೇರಿದಂತೆ SDRF ತಂಡವೂ ಶೋಧ ಕಾರ್ಯಾಚರಣೆ ಮುಂದುವರೆಸಿದೆ. ಪೋಲೀಸರು ಹನುಮಾನ ನಗರ,ಜಾಧವ ನಗರದಲ್ಲಿ ಅಳವಡಿಸಿರುವ ಸಿಸಿ ಟಿವಿ ಪೋಟೇಜ್ ಪರಶೀಲಿಸಿ ಚಿರತೆಯ ಚಲನವಲನಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.