ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಒಂದಲ್ಲ, ಎರಡಲ್ಲ, ಮೂರು ಚಿರತೆ ಪ್ರತ್ಯಕ್ಷವಾಗಿದ್ದು ಈ ವಿಚಾರವಾಗಿಬೆಳಗಾವಿ ಗಾಲ್ಫ್ ಮೈದಾನದಲ್ಲಿ ಎಂಟು ಕಡೆ ಬೋನು ಇಟ್ಟು ಕಾಯುತ್ತಿದ್ದಾರೆ.ಆದ್ರೂ ಚಿರತೆ ಬೋನಿಗೆ ಬಿದ್ದಿಲ್ಲ.ಚಿರತೆ ಸಿಗದಿದ್ರೆ ನೋಡೋಣ ಕಡೆಗೆ ಮುಧೋಳ ನಾಯಿಗಳನ್ನು ತರೋಣ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಧ್ವಜಾರೋಹಣದ ಬಳಿಕ,ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.ಬೋನಿನಲ್ಲಿ ಸಿಬ್ಬಂದಿಯೇ ಕುಳಿತು ಚಿರತೆಗಾಗಿ ಕಾಯುತ್ತಿದ್ದಾರೆ.
ಚಿರತೆ ಸೆರೆಗೆ 50 ಜನ ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ.ಚಿರತೆ ಹಿಡಿಯುವ ಪರಿಣಿಯರನ್ನು ನಿಯೋಜನೆ ಮಾಡಿದ್ದೇವೆ.ಚಿರತೆ ಸಿಗದಿದ್ರೆ ನೋಡೋಣ ಕಡೆಗೆ ಮುಧೋಳ ನಾಯಿಗಳನ್ನು ತರೋಣ ಎಂದು ಸಚಿವರು ಹೇಳಿದ್ದಾರೆ.
ನಾನು ಹೇಳಿದ್ದು ಜೋಕ್ ಅಲ್ಲ, ಸಿರಿಯಸ್,ಮುಧೋಳ ನಾಯಿ ವಾಸನೆ ಮೇಲೆ ಚಿರತೆ ಎಲ್ಲಿದೆ ಅಂತಾ ಪತ್ತೆ ಹಚ್ಚುತ್ತೆ.ಚಿರತೆ ಅಷ್ಟೇ ಅಲ್ಲ ಏನ್ ಬೇಕಾದ್ ಇರಲಿ ವಾಸನೆ ಮೇಲೆ ಪತ್ತೆ ಹಚ್ಚುತ್ತೆ.ಹೀಗಾಗಿ ಮಿಲಿಟರಿಗೆ ನಮ್ಮ ಮುಧೋಳ ನಾಯಿಗಳನ್ನು ಒಯ್ಯುತ್ತಾರೆ.ವೈರಿಗಳು ಎಲ್ಲಿಯೇ ಅಡಗಿ ಕುಳಿತಿದ್ರೆ ಹುಡುಕಿ ಕೊಡುತ್ತೆ.ಚಿರತೆ ನಾಯಿಯನ್ನು ಹಿಡಿದು ತಿನ್ನುತ್ತೆ ಆ ವಿಷಯ ಬೇರೆ, ಆದ್ರೆ ಚಿರತೆ ಎಲ್ಲಿ ಇದೆ ಅಂತಾ ತೋರಿಸುತ್ತೆ. ಎಂದು,ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.