ಕೃಷ್ಣ ವೇಷಧಾರಿಯಲ್ಲಿ ಮಿಂಚಿದ ಮುಸ್ಲಿಂ ಬಾಲಕ…!
ಭಾರತ ವೈವಿಧ್ಯಮಯ ರಾಷ್ಟ್ರ. ಇಲ್ಲಿ ಹಲವು ಜಾತಿ- ಧರ್ಮಗಳಿದ್ದರೂ ಐಕ್ಯತೆಯೇ ಇಲ್ಲಿನ ವಿಶೇಷತೆ. ಆದ್ರೆ ಇತ್ತೀಚಿಗೆ ಧರ್ಮ-ಧರ್ಮಗಳ ನಡುವೆ ಒಡಕ್ಕುಂಟು ಮಾಡಿ, ಸಾಮರಸ್ಯವನ್ನ ಹದಗೆಡಿಸುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಹಿಂದೂ- ಮುಸ್ಲಿಂ ಬಾಯಿಬಾಯಿ ಎನ್ನುವ ಸಂದೇಶ ಆಗಾಗ ಮೂಡಿ ಬರುತ್ತಲೇ ಇದೆ. ಇದಕ್ಕೆ ಉದಾಹರಣೆ ಈ ಮುಸ್ಲಿಂ ಕುಟುಂಬ.ಗಡಿ ಜಿಲ್ಲೆ ಬೆಳಗಾವಿಯ ಸದಾಶಿವ ನಗರದಲ್ಲಿನ ಮೊಕಾಶಿ ಕುಟುಂಬ ಹಿಂದೂ ಮುಸ್ಲಿಂ ಬೇಧ ಭಾವ ಮಾಡದೇ ಕೃಷ್ಣ ಅಷ್ಟಮಿ ದಿನ ತಮ್ಮ ಮುದ್ದಿನ ಮಗ ಅದ್ನಾನ್ ಆಸೀಪ್ ಮೊಕಾಶಿಯನ್ನು ಕೃಷ್ಣನ ವೇಷ ಹಾಕಿ ಗಮನ ಸೆಳೆದಿದ್ದಾರೆ. ಥೇಟ್ ಶ್ರೀಕೃಷ್ಣನಂತೆ ಪೋಷಾಕು ಹಾಕಿ, ಕೊಳಲು ನೀಡಿ ನಗುನಗುತ್ತಲೇ ಸಂಭ್ರಮದಿಂದ ಶಾಲೆಗೆ ಕೊಟ್ಟು ಕಳಿಸಿದ್ದಾರೆ.ನಗರದ ಲವ್ ಡೆಲ್ ಶಾಲೆಯಲ್ಲಿ ನಡೆದ ಕೃಷ್ಣನ ಫೋಷಾಕು ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾನೆ.ಮಗುವಿನ ಈ ಪೋಟೋಗಳು ಇದೀಗ ಬಾರೀ ವೈರಲ್ ಆಗುತಿದ್ದು,ಕುಟುಂಬದ ಸಾಮರಸ್ಯ ಮನಸ್ಥಿತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮರಸ್ಯವೇ ಭಾರತದ ಶಕ್ತಿ ಎನ್ನುವುದು ಇದಕ್ಕೆ ಹೇಳೋದು.