ಚಿರತೆ ಪತ್ತೆಗೆ ಫೀಲ್ಡ್ ಗೆ ಇಳಿದ,ಅರಣ್ಯ,ಪೋಲೀಸ್ ಇಲಾಖೆ ಫೋರ್ಸ್…!!
ಬೆಳಗಾವಿ- ಬರೊಬ್ಬರಿ ಎರಡು ವಾರದಿಂದ ಬೆಳಗಾವಿ ಮಹಾನಗರದಲ್ಲಿ ಮನೆ ಮಾಡಿರುವ ಚಿರತೆ ಪತ್ತೆಗೆ ಇಂದು ಮಧ್ಯಾಹ್ನ ಅರಣ್ಯ ಇಲಾಖೆ,ಹಾಗೂ ಪೋಲೀಸ್ ಇಲಾಖೆಯ ಬೃಹತ್ ಫೋರ್ಸ್ ದೊಡ್ಡ ಮಟ್ಟದ ಕಾರ್ಯಾಚರಣೆ ಶುರು ಮಾಡಿದೆ.
ಬೆಳಗಾವಿ ಗಾಲ್ಫ್ ಮೈದಾನಕ್ಕೆ ಹೊಂದಿಕೊಂಡಿರುವ ಬೆಳಗಾವಿ ಕ್ಲಬ್ ಆವರಣದಲ್ಲಿ ಜಮಾಯಿಸಿದ ಪೋರ್ಸ್ ಗೆ ಅಧಿಕಾರಿಗಳು ಮಾರ್ಗದರ್ಶನ ಮಾಡಿದ್ರು. ಡಿಸಿಪಿ ರವೀಂದ್ರ ಗಡಾದೆ,ಎಸಿಪಿ ನಾರಾಯಣ ಭರಮಣಿ,ಹಾಗು ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಪತ್ತೆಯ ಕಾರ್ಯಾಚರಣೆಯ ಕುರಿತು ವಿಚಾರ ವಿನಿಮಯ ಮಾಡಿಕೊಂಡ ಬಳಿಕ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.
ಪೋಲೀಸ್ ಇಲಾಖೆ ಧ್ವನಿವರ್ದಕಕಗಳ ಮೂಲಕ, ಗಾಲ್ಫ್ ಪ್ರದೇಶ,ಹನುಮಾನಗರ,ಕುವೆಂಪು ನಗರ,ದೂರದರ್ಶನ ನಗರ,ಜಾಧವ ನಗರ,ಹಾಗೂ ಕ್ಯಾಂಪ್ ಪ್ರದೇಶದ ಜನರಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.ಯಾರೊಬ್ಬರೂ ಮನೆಯಿಂದ ಹೊರಗೆ ಬರಬಾರ್ದು ಎನ್ನುವ ಎಚ್ಚರಿಕೆ ನೀಡಲಾಗುತ್ತದೆ.
ಅರಣ್ಯ ಇಲಾಖೆಯಿಂದ ಮದ್ದೇರುವ ಗೂಂಡ ಹೊಡೆದು ಚಿರತೆಯನ್ನು ಅಸ್ವಸ್ಥ ಗೊಳಿಸಿ ಚಿರತೆ ಮೂರ್ಛೆ ಹೋದ ಬಳಿಕ, ಅದನ್ನು ಬಲೆಗೆ ಹಾಕಲು ಸ್ಪೆಶಲ್ ಶೂಟರ್ ಗಳು ಸಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ಇಂದು ಸಂಜೆ ಅಥವಾ ರಾತ್ರಿಯೊಳಗಾಗಿ ಚಿರತೆಯನ್ನು ಬಲೆಗೆ ಬೀಳಿಸಲು ಅರಣ್ಯ ಹಾಗೂ ಪೋಲೀಸ್ ಇಲಾಖೆ ಸಂಕಲ್ಪ ಮಾಡಿದೆ.