ಕಣ್ಣೆದುರಿಗೆ ಜಂಪ್ ಮಾಡಿದ ಚಿರತೆ ಬಲೆಗೆ ಬೀಳಲಿಲ್ಲ…!!
ಬೆಳಗಾವಿ- ಒಂದು ಕಡೆ ಅರಣ್ಯ ಇಲಾಖೆಯ ಸಿಬ್ಬಂಧಿ,ಇನ್ಮೊಂದು ಕಡೆ,ಪೋಲೀಸರಿಂದ ಗಾಳಿಯಲ್ಲಿ ಫೈರಿಂಗ್,ಕೂಗಾಟ,ಚೀರಾಟದ ಕೂಗಾಟದ ನಡುವೆ ಬೆಳಗಾವಿಯ ಕ್ಲಬ್ ರಸ್ತೆಯ ವನಿತಾ ವಿದ್ಯಾಲಯದ ಹಿಂಬದಿಯಲ್ಲಿರುವ, ಗಿಡಗಂಟೆಗಳಿಂದ ಓಡಿ ಬಂದ ಚಿರತೆ,ಎಲ್ಲರ ಕಣ್ಣೆದುರೇ ರಸ್ತೆ ದಾಟಿ,ಜಂಪ್ ಮಾಡಿ, ಜಾಳಿಗೆ ಹರಿದು ಪಕ್ಕದ ಗಾಲ್ಫ್ ಮೈದಾನ ಸೇರಿಕೊಂಡಿದೆ ಚಾಲಾಕಿ ಚಿರತೆ.
ಇಂದು ಬೆಳಗ್ಗೆ ಖಾಸಗಿ ಬಸ್ ಚಾಲಕನಿಗೆ, ಚಿರತೆ ಕಾಣಿಸಿಕೊಂಡ ಬಳಿಕ,ಅರಣ್ಯ ಇಲಾಖೆ ಮತ್ತು ಪೋಲೀಸ್ ಇಲಾಖೆಯ ನೂರಾರು ಸಿಬ್ಬಂಧಿಗಳು ಕಾರ್ಯಾಚರಣೆ ಶುರು ಮಾಡಿದರು.ಪೋಲೀಸ್ ಅಧಿಕಾರಿಗಳು ಒಂದು ಕಡೆ ಗಾಳಿಯಲ್ಲಿ ಗುಂಡು ಹಾರಿಸಿ ಸದ್ದು ಮಾಡಿದ್ರು,ಇನ್ನೊಂದು ಕಡೆ ಅರಣ್ಯ ಇಲಾಖೆ ಸಿಬ್ಬಂಧಿಗಳು ಕೂಗಾಡಿ ಸದ್ದು ಮಾಡಿದ ಬಳಿಕ ಗಿಡಗಂಟೆಗಳಿಂದ ಹೊರಬಂದ ಚಿರತೆ ರೋಡ್ ಜಂಪ್ ಮಾಡಿ,ಕಬ್ಬಿಣದ ಜಾಳಿಗೆ ಹರಿದು ಗಾಲ್ಫ್ ಮೈದಾನ ಸೇರಿಕೊಂಡಿದೆ.
ಅರವಳಿಕೆ ಬಂದೂಕಿನಿಂದ ಗುಂಡು ಹಾರಲಿಲ್ಲ..ಚಿರತೆ ಬಲೆಗೆ ಬೀಳಲಿಲ್ಲ
ಒಂದು ಕಡೆ ಅರಣ್ಯ ಇಲಾಖೆಯ ಗಾರ್ಡ್ ಗಳು ಅರವಳಿಕೆ ಬಂದೂಕು ಹಿಡಿದು,ಬಲೆ ಹಿಡಿದು ನಿಂತರೂ ಯಾವುದೇ ಪ್ರಯೋಜನ ಆಗಲಿಲ್ಲ.ಅರವಳಿಕೆ ಗುಂಡು ಹಾರಲಿಲ್ಲ,ಚಿರತೆ ಬಲೆಗೆ ಬೀಳಲಿಲ್ಲ.
ಈಗ ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಸರ್ಚಿಂಗ್ ಆರಂಭಿಸಿದ್ದಾರೆ.ಜಿಲ್ಲಾಧಿಕಾರಿ ನಿತೇಶ್ ಪಾಟೀಲ,ಡಿಸಿಪಿ ಗಡಾದೆ,ಎಸಿಪಿ ಭರಮಣಿ ಅವರು ಕಾರ್ಯಾಚರಣೆಯ ಮೇಲೆ ನಿಗಾ ವಹಿಸಿದ್ದಾರೆ. ಕೂಡಲೇ ಚಿರತೆ ಹಿಡಿಯುವ ಎಕ್ಸಪರ್ಟ್ ಗಳನ್ನು ಬೆಳಗಾವಿಗೆ ಕರೆಯಿಸಿ ಚಿರತೆಯನ್ನು ಆದಷ್ಟು ಬೇಗ ಬಲೆಗೆ ಬೀಳಿಸುವ ಪ್ರಯತ್ನ ಮಾಡುವದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ದಾಂಡೇಲಿಯ ಕೂಳಗೇರಿ ಫಾರೇಸ್ಟ್ ನಿಂದ ಪಳಗಿದ ಆನೆಗಳನ್ನು ಬೆಳಗಾವಿಗೆ ತಂದು ಚಿರತೆ ಹಿಡಿಯುವ ಕಾರ್ಯಾಚರಣೆ ಮಾಡುವದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.