ಬೆಳಗಾವಿ- ಬೆಳಗಾವಿಯಲ್ಲಿ ಇಂದು ಚಿರತೆ ಹಿಡಿಯಲು ನಡೆಸಿದ ಹಲವಾರು ಪ್ರಯತ್ನಗಳು ವ್ಯರ್ಥವಾದವು.ಸರಿಯಾದ ಪ್ಲ್ಯಾನ್ ಇಲ್ಲದೇ ಇರುವದರಿಂದ ಚಾಲಾಕಿ ಚಿರತೆ ಜಸ್ಟ್ ಮಿಸ್ ಆಯ್ರು..
ಬೆಳಗ್ಗೆ ಹಿಂಡಲಗಾ ರಸ್ತೆಯ ಮಹಾತ್ಮಾ ಗಾಂಧಿ ಸರ್ಕಲ್ ಬಳಿ ರಸ್ತೆಯಲ್ಲೇ ಕಾಣಿಸಿಕೊಂಡ ಚಿರತೆ,ಪಕ್ಕದಲ್ಲಿರುವ ಗಿಡಗಂಟೆಗಳಲ್ಲಿ ಅಡಗಿತು. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂಧಿಗಳು, ಮತ್ತು ಪೋಲೀಸರು ಧಾವಿಸಿ,ಕಾರ್ಯಾಚರಣೆ ಶುರು ಮಾಡಿದ್ರು,ಪೋಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ರು,ಅರಣ್ಯ ಇಲಾಖೆಯವರು ಕೂಗಾಡಿ,ಚೀರಾಡಿ ಸದ್ದು ಮಾಡಿದಾಗ ಎಲ್ಲರ ಕಣ್ಣೆದುರೇ ಚಿರತೆ ರಸ್ತೆ ಜಂಪ್ ಮಾಡಿ ಗಾಲ್ಫ್ ಮೈದಾನ ಸೇರಿಕೊಂಡಿತು.
ನಂತರ ಬೇಟೆ ನಾಯಿಗಳನ್ನು ತಂದು ಚಿರತೆ ಪತ್ತೆಗೆ ಶ್ವಾನಗಳಿಂದಲೂ ಕಾರ್ಯಾಚರಣೆ ನಡೆಯಿತು.ಆದ್ರೂ ಚಾಲಾಕಿ ಚಿರತೆ ಪತ್ತೆಯಾಗಲಿಲ್ಲ.ಸಿಸಿಎಫ್ ಮಂಜುನಾಥ ಚವ್ಹಾನ್ ಅವರು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಅರಣ್ಯ ಪ್ರದೇಶದಿಂದ ಎರಡು ಆನೆಗಳನ್ನು ಬೆಳಗಾವಿಗೆ ತರೆಸುವದಾಗಿ ಹೇಳಿದ್ದಾರೆ.
ನಾಳೆ ಬೆಳಗ್ಗೆ ಎರಡು ಆನೆಗಳು ಬೆಳಗಾವಿಗೆ ಬರಲಿದ್ದು ಆನೆ ಮೇಲೆ ಸವಾರಿ ಮಾಡುವ ಮೂಲಕ ಚಿರತೆ ಪತ್ತೆ ಕಾರ್ಯಾಚರಣೆ ನಡೆಯಲಿದೆ.