ಬೆಳಗಾವಿ-ಚಿರತೆ ಹಿಡಿಯಲು ಬೆಳಗಾವಿಗೆ ಎರಡು ಆನೆ,ವಿಶೇಷ ತಂಡ,ಜೊತೆಗೆ ಗಾಡಿ ತುಂಬ ಹಂದಿ ಹಿಡಿಯುವ ಬಲೆಗಳನ್ನು ಬೆಳಗಾವಿಗೆ ತರಲಾಗಿದೆ.
ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಪತ್ತೆ ಕಾರ್ಯಾಚರಣೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಅರ್ಜುನ,ಮತ್ತು ಆಲಿಯಾ ಬ ಎರಡು ಆನೆಗಳು ಈಗ ಕಾರ್ಯಾಚರಣೆಗೆ ರೆಡಿಯಾಗುತ್ತಿವೆ.ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಹಿಡಿಯುವ ತಂಡಕ್ಕೆ ಕಾರ್ಯಾಚರಣೆ ಯಾವ ರೀತಿ ನಡೆಸಬೇಕು ಎನ್ನುವದರ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ.
ಶಾಸಕ ಅನೀಲ ಬೆನಕೆ,ಸಿಸಿಎಫ್ ಮಂಜುನಾಥ ಚವ್ಹಾನ್ ಸೇರಿದಂತೆ ಅರಣ್ಯ ಇಲಾಖೆಯ ಇತರ ಅಧಿಕಾರಿಗಳು ಕಾರ್ಯಾಚರಣೆಯ ಮೇಲೆ ನಿಗಾ ವಹಿಸಿದ್ದಾರೆ. ಚಿರತೆ ಹಿಡಿಯಲು ಹುಕ್ಕೇರಿಯಿಂದ ಟಾಟಾ ಎಸ್ ವಾಹನ ತುಂಬ ಹಂದಿ ಹಿಡಿಯುವ ಬಲೆಗಳನ್ನು ತರಲಾಗಿದೆ.
ಆನೆಯ ಮೇಲೆ ಕುಳಿತು ಚಿರತೆಗೆ ಬಂದೂಕಿನ ಮೂಲಕ ಅರವಳಿಕೆ ಮದ್ದು ಸಿಡಿಸುವ ತಜ್ಞರು,ಹಂದಿ ಹಿಡಿಯುವ ಗ್ರಾಮೀಣ ಭಾಗದ ಪರಣಿತರು,ಅತ್ಯಾಧುನಿಕ ಉಪಕರಣಗಳು,ಚಿರತೆ ಚಲನವಲನದ ಮಾಹಿತಿ ಸಂಗ್ರಹಿಸುವ ಅತ್ಯಾಧುನಿಕ ಉಕರಣಗಳು,ಸೇರಿದಂತೆ ಎಲ್ಲ ರೀತಿಯ ತಯಾರಿ ಮಾಡಿಕೊಂಡಿರುವ ಅರಣ್ಯ ಇಲಾಖೆ ಶೀಘ್ರದಲ್ಲೇ ಚಿರತೆ ಪತ್ತೆ ಕಾರ್ಯಾಚರಣೆ ಶುರು ಮಾಡಲಿದೆ.