ಬೆಳಗಾವಿ- ಬೆಳಗಾವಿಯಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆ ನಿರಂತರವಾಗಿ ಕಾರ್ಯಾಚರಣೆ ನಡೆಸುವ ಜೊತೆಗೆ ನಿತ್ಯ ಲಕ್ಷ ಲಕ್ಷ ಖರ್ಚು ಮಾಡುತ್ತಿದ್ದಾರೆ
ನಿತ್ಯ ಲಕ್ಷ ಲಕ್ಷ ವ್ಯಯಿಸಿದರೂ ಚಾಲಾಕಿ ಚಿರತೆ ಬಲೆಗೆ ಬೀಳುತ್ತಿಲ್ಲ.ಬೆಳಗಾವಿಯಲ್ಲಿ ಪ್ರತ್ಯಕ್ಷವಾದ ಚಿರತೆ ಶೋಧಕ್ಕೆ ಈಗಾಗಲೇ ಲಕ್ಷ ಲಕ್ಷ ಖರ್ಚಾಗಿದೆ.ನಿತ್ಯ ಅಂದಾಜು 2.50 ಲಕ್ಷ ವ್ಯಯಿಸುತ್ತಿರುವ ಅರಣ್ಯ ಇಲಾಖೆ,ಕಾರ್ಯಾಚರಣೆ ಮುಂದುವರೆಸಿದೆ.
ಬೆಳಗಾವಿ ಅರಣ್ಯ ಇಲಾಖೆ ಬಳಿ ಇರುವ ವಿಶೇಷ ಅನುದಾನ ಶೋಧಕ್ಕೆ ಬಳಕೆ ಮಾಡಲಾಗುತ್ತಿದೆ.ಈವರೆಗೆ ಅಂದಾಜು 30 ಲಕ್ಷ ವೆಚ್ಚ ಅರಣ್ಯ ಇಲಾಖೆಯಿಂದ ಖರ್ಚಾಗಿದೆ.ಶಿವಮೊಗ್ಗದಿಂದ ಬಂದಿರುವ ಗಜಪಡೆ,ಹಾಗೂ ನೂರಾರು ಸಿಬ್ಬಂದಿಗಾಗಿ ನಿತ್ಯ ಲಕ್ಷ ಲಕ್ಷ ವೆಚ್ಚ ಖರ್ಚಾಗುತ್ತಲೇ ಇದ್ದು ಚಿರತೆ ಅರಣ್ಯ ಇಲಾಖೆಗೆ ಕೈಕೊಡುತ್ತಲೇ ಇದೆ.ಗಾಲ್ಫ್ ಮೈದಾನದ ಗಿಡಗಂಟೆ ತೆರವಿಗೆ ಕಳೆದ ಎರಡು ದಿನಗಳಿಂದ 10 ಜೆಸಿಬಿ ಬಳಕೆ ಮಾಡಲಾಗಿದೆ.22ನೇ ದಿನಕ್ಕೆ ಕಾಲಿಟ್ಟ ಶೋಧಕಾರ್ಯ, ಟ್ರ್ಯಾಪ್ ಕ್ಯಾಮರಾದಲ್ಲಿ ನಿತ್ಯ ಚಿರತೆ ಸೆರೆಯಾಗುತ್ತಲೇ ಇದೆ.
ವೆಚ್ಚದ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.