ಉಮೇಶ್ ಕತ್ತಿಯ ಕೃಷಿಹೊಂಡ,ಶ್ರೀಮಂತರ ತೋಟಕ್ಕೆ ಸಾಹುಕಾರನ,ನೀರಾವರಿ.,..!!!!
ಬೆಳಗಾವಿ- ನಾಳೆ ರಾಜ್ಯ ಸಚಿವ ಸಂಪುಟದ ವಿಸ್ತರಣೆ ನಡೆಯಲಿದೆ.ಜಿಲ್ಲೆಯ ಸಾಹುಕಾರ್,ರಮೇಶ್ ಜಾರಕಿಹೊಳಿ,ಉಮೇಶ್ ಕತ್ತಿ,ಮತ್ತು ಶ್ರೀಮಂತ ಪಾಟೀಲ ಅವರು ಮಂತ್ರಿಯಾಗುವದು ಬಹುತೇಕ ಖಚಿತವಾಗಿದೆ.
ಯಾರಿಗೆ ಯಾವ ಖಾತೆ ? ಎನ್ನುವ ಲೆಕ್ಕಾಚಾರ ಈಗ ಶುರುವಾಗಿದೆ.ರಮೇಶ್ ಜಾರಕಿಹೊಳಿ ಅವರ ಬೇಡಿಕೆಯಂತೆ,ನೀರಾವರಿ,ಉಮೇಶ್ ಕತ್ತಿ ಅವರಿಗೆ ಕೃಷಿ,ಶ್ರೀಮಂತ ಪಾಟೀಲರಿಗೆ ತೋಟಗಾರಿಕೆ,ಇಲಾಖೆಯ ಖಾತೆಗಳು ಸಿಗುವ ಸಾದ್ಯತೆಗಳಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಕೃಷಿ ಬಜೆಟ್ ಮಂಡಿಸಿ ಇತಿಹಾಸ ಸೃಷ್ಠಿಸಿದ್ದ ಉಮೇಶ್ ಕತ್ತಿ ಅವರು ಕೃಷಿ ಮಂತ್ರಿ ಆಗ್ತಾರೆ ಎಂದು ಹೇಳಲಾಗಿದೆ.ರಮೇಶ್ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಖಾತೆ ಸಿಗುವದು ಖಚಿತ ಎಂದು ತಿಳಿದುಬಂದಿದ್ದು ಶ್ರೀಮಂತ ಪಾಟೀಲರಿಗೆ ತೋಟಗಾರಿಕೆ ಇಲಾಖೆ ಸಿಗುವ ಸಾಧ್ಯತೆ ಇದೆ.
ಇವತ್ತು ರಾತ್ರಿ ಏನಾದ್ರೂ ಬೆಳವಣಿಗೆ ನಡೆಯಬಹುದು .ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡಬೇಕೆನ್ನುವ ವಿಚಾರ ಬಂದಾಗ ಜೈನ ಸಮುದಾಯದ ಅಭಯ ಪಾಟೀಲರೂ ಲಾಟರಿ ಹೊಡೆಯಬಹುದು ಎನ್ನುವದು ಕೆಲವರ ನಿರೀಕ್ಷೆಯಾಗಿದೆ.
ಒಟ್ಟಾರೆ ಈ ಬಾರಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಬೆಳಗಾವಿಗೆ ಬಂಪರ್ ಕೊಡುಗೆ ಸಿಗುವದು ಗ್ಯಾರಂಟಿ….
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ