ಬೆಳಗಾವಿ-ಅಲ್ಲಿ ಎಂದಿನಂತೆ ಸಹಜ ವಾಹನ ಸಂಚಾರವಿತ್ತು,ಆದ್ರೆ ಏಕಾಏಕಿ ಪೋಲೀಸ್ರ ಸೈರನ್ ಕೇಳಿಸಿಸಿತು,ಪೋಲೀಸ್ರು ಕ್ರಿಮಿನಲ್ಸ್ ಗಳನ್ನು ಬೆನ್ನಟ್ಟಿ ಕರ್ನಾಟಕದ ಗಡಿಯವರೆಗೂ ಬೆನ್ನಟ್ಟಿ ಕೊನೆಗೂ ಕ್ರಿಮಿನಲ್ಸ್ ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.
ರಾಜಸ್ಥಾನ, ಗುಜರಾತ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ದರೋಡೆ ಸುಲಿಗೆ,ಕೊಲೆ ಮಾಡಿದ ಈ ಕಿರಾತಕರು ಹಲವು ರಾಜ್ಯಗಳಲ್ಲಿ ನಡೆದ ಅನೇಕ ಅರಾಧಗಳಲ್ಲಿ ಭಾಗಿಯಾಗಿದ್ದರು.ಈ ಭಯಾನಕ ಕ್ರಿಮಿನಲ್ಸ್ ಗಳನ್ನು ಸಿನಿಮಾ ಮಾದರಿಯಲ್ಲಿ ಬೆನ್ನಟ್ಟಿದ ಪೋಲೀಸರು ಕೊನೆಗೆ ಬೆಳಗಾವಿಯ ನಿಪ್ಪಾಣಿ ಬಳಿಯ ಕುಗನೋಳಿ ಚೆಕ್ ಪೋಸ್ಟ್ ಬಳಿ ಅವರನ್ನು ಬಂಧಿಸಿದರು.
ಖತರ್ನಾಕ್ ಗ್ಯಾಂಗ್ ಕೊಲ್ಹಾಪೂರ ಮಾರ್ಗವಾಗಿ ಬೆಂಗಳೂರು ಕಡೆಗೆ ಸಂಚರಿಸುತ್ತಿರುವ ಮಾಹಿತಿ ,ಮಹಾರಾಷ್ಟ್ರದ ಕೊಲ್ಹಾಪೂರ ಪೋಲೀಸರಿಗೆ ಸಿಕ್ಕಿತ್ತು,ಮಾಹಿತಿ ಆಧರಿಸಿ ಕ್ರಮಿನಿಲ್ಸ್ ಗಳು ಸಂಚರಿಸುತ್ತಿರುವ ಕಾರನ್ನು ತಡೆಯಲು ಕೃತಕ ಸ್ಪೀಡ್ ಬ್ರೇಕರ್ ಗಳನ್ನು ಹಾಕಲಾಗಿತ್ತು.ಇದನ್ನು ಲೆಕ್ಕಿಸದೇ ಅತ್ಯಂತ ವೇಗವಾಗಿ ಪರಾರಿಯಾಗುತ್ತಿದ್ದ ಕಿರಾತಕರನ್ನು ಕುಗನೋಳಿ ಕ್ರಾಸ್ ಬಳಿ ಬಂಧಿಸಲಾಗಿದೆ.
ಈ ಕಾರ್ಯಾಚರಣೆಯ ಸಂಧರ್ಭದಲ್ಲಿ ಬೆಳಗಾವಿಯ ಕುಗನೋಳಿ ಚೆಕ್ ಪೋಸ್ಟ್ ಹತ್ತಿರ ಫೈರಿಂಗ್ ಆಗಿಲ್ಲ ಎಂದು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಕುಗನೋಳಿ ಚೆಕ್ ಪೋಸ್ಟ್ ಹತ್ತಿರ ಕೊಲ್ಹಾಪೂರ ಪೋಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಐದು ಜನ ಅಂತರ ರಾಜ್ಯ ಆರೋಪಿಗಳನ್ನು ಕೊಲ್ಹಾಪೂರ ಪೋಲೀಸ್ರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.