ಬೆಳಗಾವಿ- ಕೆಪಿಟಿಸಿಎಲ್ ಜ್ಯುನಿಯರ್ ಇಂಜಿನಿಯರ್ ಪರೀಕ್ಷೆಯಲ್ಲಿ ಹೈಟೆಕ್ ನಕಲು ಮಾಡಲು,ಇಲೆಕ್ಟ್ರಾನಿಕ್ ಮೆಟೀರಿಯಲ್ಸ್ ಸಪ್ಲಾಯ್ ಮಾಡಿದ್ದ ಆರೋಪಿ ಈಗ ಬೆಳಗಾವಿ ಪೋಲೀಸರ ಬಲೆಗೆ ಬಿದ್ದಿದ್ದಾನೆ.
ಸ್ಮಾರ್ಟ್ ವಾಚ್ ಮೂಲಕ ಪರೀಕ್ಷೆಯಲ್ಲಿ ಸೂಕ್ಷ್ಮವಾಗಿರುವ ಇಲೆಕ್ಟ್ರಾನಿಕ್ ವಸ್ತುಗಳನ್ನು ಪೂರೈಸಿದ ಬೆಂಗಳೂರ ಮೂಲದ ವ್ಯಕ್ತಿ ಈಗ ಜೈಲು ಪಾಲಾಗಿದ್ದು,ಹೈಟೆಕ್ ನಕಲು ಜಾಲವನ್ನು ಬೇರು ಸಮೇತ ಕಿತ್ತುವಲ್ಲಿ ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಯಶಸ್ವಿಯಾಗಿದ್ದಾರೆ.
ಆರೋಪಿ ತನಾದ1) ಮೊಹಮ್ಮದ ಅಜೀಮುದ್ದಿನ್ @ ಅಜೀಮ ಸಾ: ದೇವಸಂದ್ರ ಬೆಂಗಳೂರು ವಯಸ್ಸು: 37 ಉದ್ಯೋಗ: ವ್ಯಾಪಾರ ಈತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಈತನು ವಿವಿಧ ಬಗೆಯ ಇಲೆಕ್ಟ್ರಾನಿಕ್ ಡಿವೈಸ್ ಗಳನ್ನು ದೆಹಲಿ ಮತ್ತು ಹೈದರಾಬಾದ್ ದಿಂದ ತಂದು ಸಂಜು ಭಂಡಾರಿ ,ಹಾಗೂ ಬೆಳಗಾವಿ ಜಿಲ್ಲೆಯ ಇನ್ನಿತ್ತರ್ ಜನರಿಗೆ ಈತನಿಗೆ ಕೊಟ್ಟಿದ್ದು,
ಈತನಿಂದ 2 ಮೊಬೈಲ್ ಮತ್ತು ವಿವಿಧ ಬಗೆಯ ಇಲೆಕ್ಟ್ರಾನಿಕ್ ಡಿವೈಸಗಳು ಒಟ್ಟು 179 , ಇಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿದ್ ಎನ್ 95 ಮಾಸ್ಕ್ ಒಟ್ಟು 07, ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿದ್ ಬನಿಯನ್ ಒಟ್ಟು 41, ವಿವಿಧ ಬಗೆಯ ಇಲೆಕ್ಟ್ರಾನಿಕ್ ಇಯರ್ ಪಿಸ್ ಒಟ್ಟು 445, ವಿವಿಧ ಬಗೆಯ ಚಾರ್ಜಿಂಗ್ ಕೇಬಲ್ ಒಟ್ಟು 554, ವಾಕಿಟಾಕಿ ಒಟ್ಟು 06 ಇವುಗಳನ್ನು ಜಪ್ತಿ ಮಾಡಲಾಗಿದೆ.