ಬೆಳಗಾವಿ – ಗಣೇಶ ವಿಸರ್ಜನೆ ವೇಳೆ ಬೆಳಗಾವಿ ಜಿಲ್ಲೆಯಲ್ಲಿ ಎರಡು ಘಟನೆಗಳು ನಡೆದಿವೆ.ಒಂದು ಕಡೆ ಓರ್ವ ಯುವಕನನ್ನು ಚೂರಿಯಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು.ಇನ್ನೊಬ್ಬ ಹಳ್ಳದಲ್ಲಿ ಕೊಚ್ಚಿ ಹೋಗಿ ಇಂದು ಬೆಳಗ್ಗೆ ಯುವಕನ ಶವ ಪತ್ತೆಯಾದ ಘಟನೆ ಬೆಳಗಾವಿ ಜಿಲ್ಕೆಯ ಪ್ರತ್ಯೇಕ ಪ್ರದೇಶಗಳಲ್ಲಿ ನಡೆದಿವೆ.
ಗಣೇಶ ವಿಸರ್ಜನೆ ವೇಳೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಮುಗಳಿ ಹಾಳ ಗ್ರಾಮದಲ್ಲಿ ಯುವಕನಿಗೆ ಚೂರಿಯಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು.ಘಟನೆ ನಡೆದು ಎರಡೇ ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದೆ.ಮುಗಳಿಹಾಳ ಗ್ರಾಮದ ಅರ್ಜುನಗೌಡ ಪಾಟೀಲ (20) ಕೊಲೆಯಾದ ಯುವಕ. ಆರೋಪಿತರು,ಪ್ರಕರಣ ಸಂಬಂಧ ಬಾಲಾಪರಾಧಿ ಸಹಿತ ನಾಲ್ವರನ್ನು ಮುರಗೋಡ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉದಯ ಭಂಡ್ರೊಲ್ಲಿ (21), ಸುಭಾಷ ಸೋಲಣ್ಣವರ (21) ವಿಠ್ಠಲ ಮೀಶಿ (20) ಬಂಧಿತರು,ಬಂಧಿತರೆಲ್ಲರೂ ಕಾಲೇಜು ವಿದ್ಯಾರ್ಥಿಗಳು, ವೈಷಮ್ಯವೇ ಘಟನೆಗೆ ಕಾರಣ ಎಂಬ ಮಾಹಿತಿ ಸಿಕ್ಕಿದೆ.ಗಣೇಶ ವಿಸರ್ಜನೆ ವೇಳೆ ಆರಂಭವಾಗಿದ್ದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.ಎದೆಯ ಭಾಗಕ್ಕೆ ಚೂರಿಯಿಂದ ಹೊಡೆದು ಪರಾರಿಯಾಗಿದ್ದ ಆರೋಪಿತರನ್ನುಎರಡೇ ಗಂಟೆಯಲ್ಲೇ ಪೊಲೀಸರು ಬಂಧಿಸಿದ್ದಾರೆ.
*ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕ ಇಂದು ಬೆಳಗ್ಗೆ ಶವವಾಗಿ ಪತ್ತೆ*
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಳವಿ ಗ್ರಾಮದಲ್ಲಿ,ಸೆ. 9 ರಂದು ಮಳೆಯ ರಕ್ಷಣೆಗಾಗಿ ಹಳ್ಳದ ಪಕ್ಕದ ಮರದ ಕೆಳಗೆ ನಿಂತಿದ್ದ ಯುವಕ,ದಿಢೀರ್ ಮಳೆಯಿಂದ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಘಟನೆ ನಡೆದಿತ್ತು.
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ
ಕೊಳವಿ ಗ್ರಾಮದ ದಂಡಪ್ಪಾ ಬಸಪ್ಪ ಮಾಲದಿನ್ನಿ (25) ಇಂದು ಶವವಾಗಿ ಪತ್ತೆಯಾಗಿದ್ದಾನೆ.
ಯುವಕನಿಗೆ ಮೂರು ದಿನಗಳಿಂದ ಶೋಧಕಾರ್ಯದಲ್ಲಿ ತೊಡಗಿದ್ದ ಅಗ್ನಿಶಾಮಕ ಸಿಬ್ಬಂದಿಗೆ ಇಂದು ಬೆಳಗ್ಗೆ ಶವ ಸಿಕ್ಕಿದೆ.ಬೆಣಚಿನಮರಡಿ-ಕೊಳವಿ ಮಾರ್ಗ ಮಧ್ಯೆ ಯುವಕ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ.ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ, ಹಳ್ಳದಿಂದ ಯುವಕನ ಶವ ಹೊರಕ್ಕೆ ತಗೆಯಲಾಗಿದೆ.ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.