ಬೆಳಗಾವಿ- ಗೆಳೆಯರ ಜೊತೆ ಈಜಲು ಹೋದ ಬಾಲಕ ನೀರು ಪಾಲಾದ ಘಟನೆ ಬೆಳಗಾವಿ ಮಹಾನಗರದ ಪಕ್ಕದಲ್ಲೇ ಇರುವ ಕೆ.ಕೆ ಕೊಪ್ಪ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಬೆಳಗಾವಿ ಪಕ್ಕದ ಕೆ.ಕೆ ಕೊಪ್ಪ ಗ್ರಾಮದಲ್ಲಿರುವ ಧರ್ಮಪೂರ ಹದ್ದಿಯಲ್ಲಿರುವ ಕಲ್ಲಿನ ಕ್ವಾರಿಯ ಹೊಂಡದಲ್ಲಿ ಗೆಳೆಯರ ಜೊತೆ ಈಜಲು ಹೋಗಿದ್ದ 14 ವರ್ಷದ ಬಾಲಕ ಈಜಲು ಬಾರದೇ ನೀರು ಪಾಲಾಗಿದ್ದಾನೆ.
ಮೂಲತಹ ಉಡಪಿಯ 14 ವರ್ಷದ ವಾಹೀಲ ದಾದಾಪೀರ ದೇಸಾಯಿ ಎಂಬ ಬಾಲಕ ತನ್ನ ತಾಯಿಯ ಜೊತೆ ಕೆ.ಕೆ ಕೊಪ್ಪ ಗ್ರಾಮದಲ್ಲಿರುವ ತನ್ನ ಅಜ್ಜಿಯ ಮನೆಗೆ ಬಂದಿದ್ದ,ಇಂದು ಬೆಳಗ್ಗೆ ವಾಹೀಲ ತನ್ನ ತಮ್ಮ ಮತ್ತು ಗ್ರಾಮದ ಮೂರ್ನಾಲ್ಕು ಗೆಳೆಯರ ಜೊತೆ ಹೊಂಡದಲ್ಲಿ ಈಜಾಡಲು ಹೋಗಿದ್ದ, ಈಜು ಬಾರದೇ ಈ ಬಾಲಕ ನೀರುಪಾಲಾಗಿದ್ದಾನೆ.ಹಿರೇಬಾಗೇವಾಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ