ಬೆಳಗಾವಿ- ಬೆಳಗಾವಿ ನಗರ ಪೋಲೀಸ್ ಆಯುಕ್ತರ ಕಚೇರಿ ಕಡೆಯಿಂದ ಆರ್ ಟಿ ಓ ಸರ್ಕಲ್ ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸು ಬ್ರೇಕ್ ಫೇಲ್ ಆಗಿ ನಿಂಬಾಳ್ಕರ್ ಬಿಲ್ಡಿಂಗ್ ಒಳಗೆ ನುಗ್ಗಿದ ಘಟನೆ ನಡೆದಿದೆ.
ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸರ್ಕಲ್ ( RTO circle) ನಲ್ಲಿರುವ ಪೋಲೀಸ್ ಇಲಾಖೆಯ ಹೊಸ ಕಟ್ಟಡದಲ್ಲೇ ಈ ಬಸ್ಸು ನುಗ್ಗಿದ್ದು ಕಂಪೌಂಡು ಒಡೆದು ಒಳಗೆ ನುಗ್ಗಿದೆ.ಬಸ್ಸಿನಲ್ಲಿ ಪ್ಯಾಸೆಂಜರ್ ಇರಲಿಲ್ಲ ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ.
ಬ್ರೇಕ್ ಫೇಲ್ ಆದ ಬಳಿಕ ಚಾಲಕ ಎದುರುಗಡೆ ಹನುಮಾನ ಮಂದಿರವನ್ನು ತಪ್ಪಿಸಿ ಪಕ್ಕದ ಬಿಲ್ಡಿಂಗ್ ಗೆ ನುಗ್ಗಿದ್ದಾನೆ. ಬೆಳಗಿನ ಜಾವ ಅಷ್ಟೊಂದು ವಾಹನ ಸಂಚಾರ,ಮತ್ತು ಪಾದಚಾರಿಗಳ ಓಡಾಟ ಇಲ್ಲದಿರುವದರಿಂದ ಯಾವುದೇ ಅನಾಹುತ ಆಗಿಲ್ಲ, ನೋ ಪಾರ್ಕಿಂಗ್ ಮತ್ತು ಅಪಘಾತಕ್ಕೀಡಾದ ವಾಹನಗಳನ್ನು ಬೆಳಗಾವಿಯ ಟ್ರಾಫಿಕ್ ಪೋಲೀಸರು ಇದೇ ಕಟ್ಟಡದ ಆವರಣದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡ್ತಾರೆ,ಬ್ರೇಕ್ ಫೇಲ್ ಆಗಿರುವ ಬಸ್ಸು ನೇರವಾಗಿ ಇದೇ ಸ್ಥಳದಲ್ಲಿ ಪಾರ್ಕ ಆಗಿರುವುದು ಅಚ್ಚರಿಯ ಸಂಗತಿಯಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ



