ಬೆಳಗಾವಿ- ಇಂದು ಬೆಳಗ್ಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ 19 ವರ್ಷದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು,ಬೆಳಗಾವಿ ಪೋಲೀಸರ ಪ್ರಾಥಮಿಕ ತನಿಖೆಯಿಂದಾಗಿ ಅನೇಕ ವಿಚಾರಗಳು ಬಹಿರಂಗವಾಗಿವೆ.
ನಿನ್ನೆ ರಾತ್ರಿ ಯುವಕನೊಬ್ಬ ಈ ಯುವತಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದ,ಈ ಯುವತಿ ನಿತ್ರಾಣ ಸ್ಥಿತಿಯಲ್ಲಿದ್ದಳು,ಎಂಎಲ್ಸಿ ಮಾಡ್ತಿವಿ ಅಂದಾಗ ಈ ಯುವಕ ಪರಾರಿಯಾಗಿದ್ದ,ಈ ಯುವತಿಯ ಹೆಚ್ಚಿನ ಚಿಕಿತ್ಸೆಗಾಗಿ ಕೆಎಲ್ಇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು,ಈ ಯುವತಿ ಗರುವಾರ ಬೆಳಗ್ಗೆ ಮೃತಪಟ್ಟ ಬಳಿಕ,ಯುವತಿಯ ಪೋಷಕರು ಇದೊಂದು ರೇಪ್ ಆ್ಯಂಡ್ ಮರ್ಡರ್ ಎಂದು ಆರೋಪಿಸಿದ್ದರು.
ಆದ್ರೆ ಪೋಲೀಸರ ಪ್ರಾಥಮಿಕ ತನಿಖೆಯಿಂದ ಯುವತಿಯ ಸಾವಿನ ಕುರಿತು ಅನೇಕ ಅನುಮಾನಗಳು ಎದುರಾಗಿವೆ. ಮೃತಪಟ್ಟಿರುವ ಯುವತಿ, ನಾಲ್ಕು ದಿನದ ಹಿಂದೆ ಪಣಜಿ ಬಸ್ ನಿಲ್ಧಾಣದಲ್ಲಿ ಬಿದ್ದು ಪೆಟ್ಟಾಗಿತ್ತು,ನಾಲ್ಕು ದಿನದ ಹಿಂದೆ ಈ ಯುವತಿ ಪಣಜಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು ಎನ್ನುವ ವಿಚಾರ ಗೊತ್ತಾಗಿದೆ.
ನಾಲ್ಕು ದಿನ ಗೋವಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ತಬಸ್ಸುಮ್ ಮರಳಿ ಬೆಂಗಳೂರಿಗೆ ಹೋಗಿದ್ದಳು,ಬೆಂಗಳೂರಿನ ಕಾಲ್ ಸೆಂಟರ್ ನಲ್ಲಿ ಡ್ಯುಟಿಗೆ ಹಾಜರಾಗಿದ್ದಳು.ತಲೆ ನೋವು ಅಂತಾ ಬೆಳಗಾವಿಗೆ ಮರಳಿ ಬಂದಿದ್ದಳು ಎಂದು ಗೊತ್ತಾಗಿದೆ.
ಪೋಲೀಸರು ಬೈಲಹೊಂಗಲ ಮೂಲದ ತಬಸ್ಸುಮ್ ಕಿತ್ತೂರ 19 ವರ್ಷದ ಯುವತಿಯ ಸಾವಿನ ಕುರಿತು ತನಿಖೆ ಆರಂಭಿಸಿದ್ದಾರೆ.ಈ ಕುರಿತು ಬೆಳಗಾವಿಯ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೆಳಗಾವಿ ಡಿಸಿಪಿ ಯುವತಿಯ ಸಾವಿನ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.