ಬೆಳಗಾವಿ- ಮಹಾರಾಷ್ಟ್ರದ ಚಂದಗಡ ತಾಲೂಕಿನ ಖದೀಮನೊಬ್ಬ ಫೇಸ್ ಬುಕ್ ವ್ಯಾಟ್ ಸಪ್ ಮೂಲಕ ಬೆಳಗಾವಿಯ ವಡಗಾವಿ ಪ್ರದೇಶದ ಆದರ್ಶ ನಗರದ ಕುಟುಂಬವೊಂದರ ಜೊತೆ ಸ್ನೇಹ ಬೆಳೆಸಿ ಕಳೆದ ಎರಡು ವರ್ಷಗಳಿಂದ ಅವರ ನೆಯಲ್ಲಿಯೇ ಆಶ್ರಯ ಪಡೆದು ಆಶ್ರಯ ನೀಡಿದ ಕುಟುಂಬಕ್ಕೆ ಲಕ್ಷಾಂತರ ರೂ ಟೋಪಿ ಹಾಕಿ ಈಗ ಶಹಾಪೂರ ಠಾಣೆಯ ಅತಿಥಿಯಾಗಿದ್ದಾನೆ
ಚಂದಗಡ ತಾಲೂಕಿನ ಕಾಗಿನೆ ಗ್ರಾಮದ ಶುಭಂ ವಿಠ್ಠಲ ದೇಸಾಯಿ ಎಂಬಾತ ಸಾಮಾಜಿಕ ಜಾಲತಾಣಗಳ ಮೂಲಕ ನಾನು ಸೈನ್ಯಾಧಿಕಾರಿ ಎಂದು ನಂಬಿಸಿ ಬೆಳಗಾವಿಯ ಆದರ್ಶ್ ನಗರದ ಭಾತಖಾಂಡೆ ಕುಟುಂಬವೊಂದರಲ್ಲಿ ಆಶ್ರಯ ಪಡೆದ ಈ ನಕಲಿ ಮಿಲಿಟರಿ ಅಧಿಕಾರಿ ಭಾತಖಾಂಡೆ ಕುಟುಂಬದ ಸದಸ್ಯರಿಗೆ ಕೊಡಬಾರದ ಕಿರುಕಳ ಕೊಟ್ಟು ಅವರಿಗೆ ಲಕ್ಷಾಂತರ ರೂ ಟೋಪಿ ಹಾಕಿದ್ದಾನೆ
ನಾನು ಕಾರ್ಗಿಲ್ ನಲ್ಲಿ ಡ್ಯುಟಿ ಮಾಡುತ್ತಿದ್ದೇನೆ ನನಗೆ ಎರಡು ಲಕ್ಷ ರೂ ಬೇಕಾಗಿದೆ ಎಂದಾಗ ಬೆಳಗಾವಿಯ ಭಾತಖಾಂಡೆ ಕುಟುಂಬ ಇತನ ಅಕೌಂಟಿಗೆ ಒಂದು ಲಕ್ಷ ಎಂಬತ್ತು ಸಾವಿರ ರೂ ಹಣವನ್ನು ಟ್ರಾನ್ಸಫರ್ ಮಾಡಿದೆ ಅದಲ್ಲದೇ ಈ ನಕಲಿ ಅಧಿಕಾರಿಗೆ ಕಳೆದ ಎರಡು ವರ್ಷಗಳಿಂದ ಆಶ್ರಯ ನೀಡುವದರ ಜೊತೆಗೆ ಇತನಿಗೆ ಹೊಸ ಬುಲೇಟ್ ಬೈಕ್ ಕೊಡಸಿದೆ
ಆದರೆ ಇತ್ತೀಚಿಗೆ ಶುಭಂ ವಿಠ್ಠಲ ದೇಸಾಯಿ ಯಾಕೋ ಏನೋ ಭಾತಖಾಂಡೆ ಕುಟುಂಬದವರನ್ನು ಥಳಿಸಿ ನನಗೆ ಕಾರು ಬೇಕು ಎಂದು ಹಠ ಹಿಡಿದ ಕಾರಣ ಈ ನಕಲಿ ಆಸಾಮಿಯ ಜಗಳ ಪೋಲೀಸ್ ಠಾಣೆಗೆ ಬಂದ ಬಳಿಕ ಇತನ ಬಣ್ಣ ಬಯಲಾಗಿದೆ
ಫೇಸ್ ಬುಕ್ ಮೂಲಜ ದೋಸ್ತೀ ಮಾಡಿ ಬೆಳಗಾವಿಯ ಮನೆಯಲ್ಲಿಯೇ ಕಳೆದ ಎರಡು ವರ್ಷದಿಂದ ಅವರ ಮನೆಯಲ್ಲಿಯೇ ಇದ್ದುಕೊಂಡು ಮೋಸ ಮಾಡಿದ ಬಗ್ಗೆ ಭಾತಖಾಂಡೆ ಕುಟುಂಬ ದೂರು ನೀಡಿದ ಹಿನ್ನಲೆಯಲ್ಲಿ ಶಹಶಪೂರ ಪೋಲೀಸರು ಆರೋಪಿ ನಕಲಿ ಮಿಲಿಟರಿ ಅಧಿಕಾರಿ ಶುಭಂ ದೇಸಾಯಿ ಯನ್ನು ಬಂದಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ
ಸಾಮಾಜಿಕ ಜಾಲತಾಣದ ಮೂಲಕ ದೋಸ್ತೀ ಮಾಡಿಕೊಂಡು ಅಪರಿಚಿತನೊಬ್ಬನಿಗೆ ಎರಡು ವರ್ಷದಿಂದ ತಮ್ಮ ಮನೆಯಲ್ಲಿ ಆಶ್ರಯ ನೀಡಿ ಇತನಿಗೆ ಲಕ್ಷಾಂತರ ರೂ ಖರ್ಚು ಮಾಡಿದ ಭಾತಖಾಂಡೆ ಕುಟುಂಬ ಮಾತ್ರ ಶುಭಂ ಮಾಡಿದ ಕರಾಮತ್ತಿನಿಂದ ಕಂಗಾಲಾಗಿದೆ