*ಹಳೆ ಪಿಂಚಣಿ ಯೋಜನೆ ಜಾರಿಯಾಗಲೆ ಬೇಕು…*ಎನ್ ಟಿ ಲೋಕೇಶ..*
*ಬೆಳಗಾವಿ* ನಗರದ ಖಾಸಗಿ ಹೋಟೆಲಿನಲ್ಲಿ ಗುರುವಾರ ದಿನಾಂಕ 3 ರಂದು, ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘ ಬೆಳಗಾವಿ ಇವರು ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಬೇಡಿಕೆಗಳನ್ನು ಹೇಳಿಕೊಂಡರು..
ಮಾಡು ಇಲ್ಲವೇ ಮಡಿ ಎಂಬ ಘೋಷವಾಕ್ಯದ ಮೂಲಕ ರಾಜ್ಯ ಸರ್ಕಾರಿ NPS ನೌಕರರು ಇದೆ ರವಿವಾರ ದಿನಾಂಕ 6 ರಂದು ಬ್ರಹತ್ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಹಳೇ ಪಿಂಚಣಿ ಯೋಜನೆ ಮತ್ತೆ ಜಾರಿಯಾಗಬೇಕು, ಮತ್ತು ಹೊಸ ಪಿಂಚಣಿ ನೀತಿ ರದ್ದಾಗಬೇಕು ಎಂಬ ಉದ್ದೇಶದಿಂದ ಈ ಯಾತ್ರ ನಡೆಯುತ್ತಿದೆ ಎಂದು ಎನ್ ಪಿ ಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎನ್ ಟಿ ಲೋಕೇಶ ತಿಳಿಸಿದರು…
ತಮ್ಮ ಜೀವಿತಾವಧಿಯ ಪೂರ್ತಿ ಸರ್ಕಾರಿ ಸೇವೆ ಮಾಡಿ, ನಂತರ ನಿವೃತ್ತರಾದ ನಂತರ ಇಳಿವಯಸ್ಸಿನಲ್ಲಿ ಅವರಿಗೆ ಆರ್ಥಿಕ ಭದ್ರತೆ ಇಲ್ಲದೆ ಹೋದಾಗ ತುಂಬಾ ಸಮಸ್ಯ ಆಗುತ್ತದೆ ಎಂದು ತಮ್ಮ ಸಮಸ್ಯ ಹೇಳಿಕೊಂಡರು..
ಡಿಸೆಂಬರ್ 19 ರಂದು ಬೆಂಗಳೂರಿನಲ್ಲಿ ಲಕ್ಷಾದಿಲಕ್ಷ ನೌಕರರು ಸೇರಿ, ಬ್ರಹತ್ತ ಸಂಕಲ್ಪ ಯಾತ್ರೆ ಮಾಡಿ ಸರ್ಕಾರದ ಗಮನ ಸೆಳೆದು ನಮ್ಮ ಬೇಡಿಕೆ ಈಡೇರಿಸಿಕೊಳ್ಳುತ್ತೇವೆ..
ಈ nps ಹೋಗಲಾಡಿಸಲು ಎಲ್ಲಾ ಇಲಾಖೆಯ ನೌಕರರ ಬೆಂಬಲ ಇದ್ದು, ಇದರಲ್ಲಿ ನಮ್ಮ ಹೋರಾಟ ಯಶಸ್ವಿ ಆಗುತ್ತದೆ ಎಂದರು..