ಬೆಳಗಾವಿ- ಹುಷಾರ್ ..! ಈ ಬಡಾವಣೆಯೊಳಗೆ ಅಪರಿಚಿತರು ಎಂಟ್ರಿಯಾದ್ರೆ 500ರೂ ದಂಡ ಹಾಕುತ್ತಿದ್ದು ಹಾಗಂತ ಗಲ್ಲಿಯ ಪ್ರವೇಶ ದ್ವಾರದಲ್ಲಿರುವ ಬೋರ್ಡ ಮೇಲೆ ಬರೆಯಲಾಗಿದೆ.
ಬೆಳಗಾವಿಯಲ್ಲಿ ಮೂರು ಕರೋನ ಪಾಸಿಟಿವ್ ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ, ಬೆಳಗಾವಿಯ ಗಲ್ಲಿ ಗಲ್ಲಿಗೂ ಆವರಿಸಿದ ಕರೋನ ಆತಂಕ ಈ ರೀತಿಯ ನಿರ್ಬಂಧಗಳಿಗೆ ಎಡೆಮಾಡಿದೆ.
ಅಪರಿಚಿತರು ಒಳಗೆ ಬಾರದಂತೆ ಮುಳ್ಳಿನ ಬೇಲಿ, ಸಿಮೆಂಟ್ ಪೈಪ್ ಹಾಕಿ ನಿರ್ಭಂದ ಮಾಡಲಾಗಿದ್ದು ಗಲ್ಲಿಗಳ ಒಳಗಡೆ ಅಪರಿಚಿತರಿಗೆ ನೋ ಎಂಟ್ರಿ..
ಬೆಳಗಾವಿಯ ಹೊರ ವಲಯದ ಯಮನಾಪುರ ಬಡಾವಣೆಯಲ್ಲಿ ಕಟ್ಟು ನಿಟ್ಟಿನ ನಿರ್ಭಂಧ ಮಾಡಲಾಗಿದ್ದು. ಒಳಗಡೆ ಎಂಟ್ರಿ ಆಗುವ ಅಪರಿಚಿತರಿಗೆ 500 ರೂಪಾಯಿ ದಂಡ ವಿಧಿಸಲು ನಿರ್ಧರಿಸಿದ್ದಾರೆ.
ಈ ಕುರಿತು ಬಡಾವಣೆಯ ಎಂಟ್ರಿಯಲ್ಲಿ ಎಚ್ಚರಿಕೆ ಬೋರ್ಡ್ ಹಾಕಿದ ಸ್ಥಳೀಯರು. ವಾಹನ ಸಂಚಾರ ಸ್ತಬ್ಧ, ಬಿಕೊ ಎನ್ನುತ್ತಿರುವ ಯಮನಾಪುರ ಬಡಾವಣೆ..
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ