ಬೆಳಗಾವಿ- ದಿನಬೆಳಗಾದ್ರೆ ಎದೆಯಲ್ಲಿ ಢವ ಢವ…ಹೆಲ್ತ ಬುಲಿಟೀನ್ ನಲ್ಲಿ ಇವತ್ತೆಷ್ಟು ಪಾಸಿಟೀವ್ ಪ್ರಕರಣಗಳು ಬರುತ್ತವೆಯೋ ಎನ್ನುವ ಆತಂಕ ಆದ್ರೆ ಇಂದು ಸಂಡೇ ಬೆಳಗಾವಿ ಪಾಲಿಗೆ ಸ್ವಲ್ಪ ರಿಲೀಫ್ ಯಾಕಂದ್ರೆ ಬೆಳಗಾವಿಯ ಯಾವುದೇ ಹೊಸ ಪ್ರಕರಣಗಳು ಇಂದು ಬೆಳಕಿಗೆ ಬಂದಿಲ್ಲ.
ರಾಜ್ಯದಲ್ಲಿ ಮೈಸೂರು ಜಿಲ್ಲೆಯ ನಾಲ್ಕು ಪಾಸಿಟೀವ್ ಪ್ರಕರಣಗಳು ಮಾತ್ರ ಬುಲಿಟಿನ್ ನಲ್ಲಿವೆ.
ಬೆಳಗಾವಿಯಲ್ಲಿ ನಿನ್ನೆಯಷ್ಟೆ ಬೆಳಗುಂದಿಯ ಪಾಸಿಟೀವ್ ಪ್ರಕರಣವನ್ನು ಬೆಳಗಾವಿಯ ನಮ್ಮ ಹೆಮ್ಮೆಯ ವೈದರು ನೆಗೆಟೀವ್ ಮಾಡುವಲ್ಲಿ ಯಶಸ್ವಿಯಾಗಿ ಬೆಳಗಾವಿ ಜಿಲ್ಲೆಗೆ ಸಿಹಿ ಸುದ್ಧಿ ನೀಡಿ ಇಡೀ ರಾಜ್ಯದ ಗಮನ ಸೆಳೆದಿದ್ದರು ನಮ್ಮ ಡಾಕ್ಟರ್ ಗಳು….
ಸಂಜೆ ಐದು ಘಂಟೆ ಸುಮಾರಿಗೆ ಸಂಜೆ ಹೆಲ್ತ ಬುಲಿಟೀನ್ ಬಿಡುಗಡೆ ಆಗುತ್ತದೆ ಈ ಬುಲಿಟೀನ್ ನಲ್ಲಿಯೂ ಗುಡ್ ನ್ಯುಸ್ ಬರಲಿ ಎಂದು ಪ್ರಾರ್ಥನೆ ಮಾಡೋಣ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ