ಬೆಳಗಾವಿ- ಗಟಕಾ ತಿಂದು ಉಗುಳುವಾಗ ಪಕ್ಕದಲ್ಲೇ ನಿಂತ ವ್ಯಕ್ತಿಗೆ ಸಿಡಿದ ಪರಿಣಾಮ ಜಗಳ ವಿಕೋಪಕ್ಕೆ ಹೋಗಿ ಗುಟಕಾ ತಿಂದು ಉಳಿದ ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೈಲಹೊಂಗಲದ ಆನಿಗೋಳ ಗ್ರಾಮದಲ್ಲಿ ಭೀಕರ ಕೊಲೆ ನಡೆದಿದ್ದು ಪ್ರಕರಣ ದಾಖಲಾಗಿದೆ.ರಾತ್ರಿ ಕುಡಿದು ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮಂಜುನಾಥ ಸುಣಗಾರ(45) ಕೊಲೆಯಾದ ವ್ಯಕ್ತಿ.
ಮಂಜುನಾಥ ಸುಣಗಾರ ಹಾಗೂ ಅಜಯ ಹಿರೇಮಠ ವ್ಯಕ್ತಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಅಜಯ್ ಹಿರೇಮಠ ಮಂಜುನಾಥ ನನ್ನು ಕಲ್ಲಿನಿಂದ ತಲೆಗೆ ಹೊಡೆದು ಸಾಯಿಸಿದ್ದಾನೆ ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಬೈಲಹೊಂಗಲ ಠಾಣಾ ಪೊಲೀಸರು ಆರೋಪಿ ಅಜಯ ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ