ಬೆಳಗಾವಿ-ಬೆಳಗಾವಿಯಲ್ಲಿ ಬಿಜೆಪಿ ನಾಯಕರು ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ಗ್ರಾಮೀಣದಲ್ಲಿ ಹಂಚಿಕೆಯಾದ ಕುಕ್ಕರ್ ಹಂಚಿಕೆಯಾಗುತ್ತಿರುವ ಮಿಕ್ಸರ್ ಜೊತೆಗೆ ಟೆಂಗಿನಕಾಯಿ ಪ್ರಮಾಣ ಸದ್ದು ಮಾಡಿದ್ದು ಈ ವಿಚಾರದ ಕುರಿತು ಮಾಜಿ ಶಾಸಕ ಸಂಜಯ ಪಾಟೀಲ ಮಾದ್ಯಮ ಮಿತ್ರರಜೊತೆ ವಾಗ್ವಾದ ಮಾಡಿ, ನಂತರ ಕ್ಷಮೆಯಾಚಿಸಿದ ಪ್ರಸಂಗ ನಡೆದಿದೆ.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಎಂ.ಬಿ ಝಿರಲಿ, ಸಂಜಯ ಪಾಟೀಲ ಸಂಸದೆ ಮಂಗಲಾ ಅಂಗಡಿ,ಶಾಸಕ ಅನೀಲ ಬೆನಕೆ ಸೇರಿದಂತೆ ಹಲವಾರು ಜನ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಎಂ.ಬಿ ಝಿರಲಿ ಮಾತಾಡಿದ ಬಳಿಕ ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಲು ಶುರು ಮಾಡಿದ್ರು, ಬೆಳಗಾವಿ ಗ್ರಾಮೀಣದಲ್ಲಿ ಮಿಕ್ಸರ್ ಹಂಚಿಕೆ, ಟೆಂಗಿನಕಾಯಿ ಪ್ರಮಾಣ ಮಾಡಿಸುವ ಸಂವಿಧಾನ ವಿರೋಧಿ ಕೆಲಸ ನಡೆಯುತ್ತಿದೆ.ಈ ಬಗ್ಗೆ ಮಾದ್ಯಮಗಳು ವಿಶೇಷ ವರದಿ ಮಾಡಿಲ್ಲ ಎಂದು ಆರೋಪಿಸಿದಾಗ,ಮಾದ್ಯಮ ಪ್ರತಿನಿಧಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿ ಸಂಜಯ ಪಾಟೀಲರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಸಂಜಯ ಪಾಟೀಲರೇ ನೀವೂ ನಿಮ್ಮ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಗಿಫ್ಟ್ ಕೊಟ್ಟಿದ್ದೀರಾ ಕುಕ್ಕರ್ ಮಿಕ್ಸರ್ ಬಗ್ಗೆ ನಿಮಗೆ ಮಾತಾಡುವ ನೈತಿಕತೆ ಇಲ್ಲ ಎಂದು ಮಾದ್ಯಮ ಪ್ರತಿನಿಧಿಯೊಬ್ಬರು ಸಂಜಯ ಪಾಟೀಲರನ್ನು ಪ್ರಶ್ನೆ ಮಾಡಿದಾಗ ಸಂಜಯ ಪಾಟೀಲ್ ನೀವು ದಾದಾಗೀರಿ ಮಾಡ್ತೀರಾ ಎಂದು ಮಾದ್ಯಮ ಪ್ರತಿನಿಧಿಗಳಿಗೆ ಪ್ರಶ್ನೆ ಹಾಕಿದಾಗ ಪತ್ರಿಕಾಗೋಷ್ಠಿಯಲ್ಲಿ ಮಾತಿನ ಚಕಮಕಿ ನಡೆಯಿತು.
ಕುಕ್ಕರ್ ಸಿಟಿಯ ಸದ್ದಿನ ಜೊತೆಗೆ ಮಿಕ್ಸರ್ ಪ್ರೆಶರ್ ಮಿಕ್ಸ್ ಆಗಿ, ಶಬ್ದ ಮಾಲಿನ್ಯವಾಗಿ, ಟೆಂಗಿನಕಾಯಿ ಪ್ರಮಾಣದ ವಿಚಾರವಾಗಿ,ಮಾಜಿ ಶಾಸಕ ಸಂಜಯ ಪಾಟೀಲ ಪತ್ರಕರ್ತರ ಜಿತೆ ವಾಗ್ವಾದ ನಡೆಸಿ ನಂತರ ಕ್ಷಮೆಯಾಚಿಸಿ ವಾದ ಪ್ರತಿವಾದಕ್ಕೆ ತೆರೆ ಎಳೆದರು.