Breaking News

ಕನ್ಹೇರಿ ಸಿದ್ದಗಿರಿಯ ಪಂಚಮಹಾಭೂತ ಲೋಕೋತ್ಸವಕ್ಕೆ ಪ್ರದಾನಿ ಮೋದಿ ಬರ್ತಾರೆ.

ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ಹೇರಿ ಸಿದ್ದಗಿರಿ ಮಹಾಸಂಸ್ಥಾನದ ಕಾಡಸಿದ್ದೇಶ್ವರ ಮಠದ ಬಳಿ ಮುಂಬರುವ ಫೆಬ್ರವರಿ ೨೦ರಿಂದ ೨೬ರವರೆಗೆ ೬೫೦ ಎಕರೆ ಭವ್ಯ ಪ್ರದೇಶದಲ್ಲಿ ಸುಮಂಗಲಮ್ ಪಂಚಮಹಾಭೂತ ಲೋಕೋತ್ಸವ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದ್ದು, ಅವರ ಕಾರ್ಯಕ್ರಮದ ಕುರಿತು ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈ ಕಾರ್ಯಕ್ರಮದಲ್ಲಿ ಸಮಾವೇಶ, ಗೋಷ್ಠಿಗಳು ನಡೆಯಲಿವೆ. ವಸ್ತು ಪ್ರದರ್ಶನವನ್ನೂ ಆಯೋಜಿಸಲಾಗಿದೆ.
ದೇಶದ ಮೂಲೆ ಮೂಲೆಗಳಿಂದ ಸುಮಾರು ೬ ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.

ಮಣ್ಣು, ನೀರು, ಗಾಳಿ, ಪರಿಸರ ರಕ್ಷಣೆ ಕುರಿತು ಈ ಸಮಾವೇಶದ ಮೂಲಕ ಜನಜಾಗೃತಿ ಮೂಡಿಸಲಾಗುವುದು. ಅಲ್ಲದೇ, ಪಶು ಪಕ್ಷಿಗಳ ಪ್ರದರ್ಶನ ನಡೆಸಲಾಗುವುದು. ೧೦ ರಾಜ್ಯಗಳ ಮುಖ್ಯಂತ್ರಿಗಳು, ೬ ರಾಜ್ಯಗಳ ರಾಜ್ಯಪಾಲರು, ಕೇಂದ್ರ ಸಚಿವರು, ಮಹಾರಾಷ್ಟ್ರ ರಾಜ್ಯದ ಸಚಿವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ವಿಶ್ವವಿದ್ಯಾಲಯಗಳ ಕುಲಪತಿಗಳು, ಪರಿಸರವಾದಿಗಳು, ಪರಿಸರ ತಜ್ಞರು, ಸಾಧುಸಂತರು ಹಾಗೂ ೨೦ ಲಕ್ಷ ವಿದ್ಯಾರ್ಥಿಗಳು, ಯುವಕರು ಈ ಉತ್ಸವದಲ್ಲಿ ಪಾಲ್ಗೊಳ್ಳುವರು. ಪರಿಸರ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ದೇಶದ ೨೩ ರಾಜ್ಯಗಳ ಕಲಾತಂಡಗಳು ತಮ್ಮ ಕಲಾಪ್ರದರ್ಶನ ಪ್ರದರ್ಶಿಸಲಿವೆ. ದೇಶದ ೫೦೦ ಜಿಲ್ಲೆಗಳ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ವಸತಿ, ಊಟದ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಲಾಗಿದೆ.

ಕೆಲ ಜನರಿಗೆ ವಸತಿ ನಿಲಯ, ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಲಾಗುವುದು, ಮತ್ತೆ ಕೆಲವರಿಗೆ ಸಮೀಪದ ಗ್ರಾಮಗಳಲ್ಲಿರುವ ಗ್ರಾಮಸ್ಥರ ಮನೆಯಲ್ಲೇ ಅತಿಥಿಗಳಿಗೆ ಆತಿಥ್ಯ ನೀಡಲಾಗುವುದು. ಈ ಬೃಹತ್ ಜನಪಯೋಗಿ ಕಾರ್ಯಕ್ರಮದ ಸಂಪೂರ್ಣ ಖರ್ಚುವೆಚ್ಚದ ಹೊಣೆಯನ್ನು ಸಾರ್ವಜನಿಕರೆ ವಹಿಸಿಕೊಂಡಿದ್ದಾರೆ. ಊಟ, ಉಪಚಾರದ ವ್ಯವಸ್ಥೆಯೂ ಜನರದ್ದೇ ಆಗಿದೆ. ಪ್ರತಿಯೊಂದು ಮನೆಯಿಂದ ೧ ಕೆಜಿ ಅಕ್ಕಿ ಪಡೆಯಲಾಗುತ್ತಿದೆ ಎಂದು ಅವರು ಹೇಳಿದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *