ಬೆಳಗಾವಿ ಉತ್ತರ: ಕಾಂಗ್ರೆಸ್ ಟಿಕೆಟ್ ಗಾಗಿ ತಿಕ್ಕಾಟ,ಮುಂದುವರೆದ ಗುದ್ದಾಟ!!

ಬೆಳಗಾವಿ- ಬೆಳಗಾವಿ ಉತ್ತರದ ಕಾಂಗ್ರೆಸ್ ಟಿಕೆಟ್ ಗಾಗಿ ದೆಹಲಿ ಮಟ್ಟದಲ್ಲಿ ಇವತ್ತಿಗೂ ತಿಕ್ಕಾಟ ನಡೆದಿದೆ.ಸೇಠ ಬ್ರದರ್ಸ್ ಮತ್ತು ಸತೀಶ್ ಜಾರಕಿಹೊಳಿ ಆಪ್ತ ಅಜೀಂ ಪಟವೇಗಾರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.

ಸತೀಶ್ ಜಾರಕಿಹೊಳಿ ಅವರು ತಮ್ಮ ಆಪ್ತ ಅಜೀಂ ಪಟವೇಗಾರ ಅವರಿಗೆ ಟಿಕೆಟ್ ಕೊಡಿಸಲು ದೆಹಲಿ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ,ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸರ್ಜೆವಾಲಾ,ಮಾಜಿ ಸಿಎಂ ಸಿದ್ರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಹಲವಾರು ಜನ ಕಾಂಗ್ರೆಸ್ ನಾಯಕರು ಸೇಠ ಬ್ರದರ್ಸ್ ಗೆ ಟಿಕೆಟ್ ಕೊಡುವಂತೆ ಶಿಫಾರಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಳಗಾವಿ ಉತ್ತರದ ಕಾಂಗ್ರೆಸ್ ಟಿಕೆಟ್ ಪಡೆಯಲು ಅಜೀಂ ಪಟವೇಗಾರ ಸಹಿತ ಸತೀಶ್ ಜಾರಕಿಹೊಳಿ ಅವರ ಮೂಲಕ ಲಾಭಿ ಮುಂದುವರೆಸಿದ್ದಾರೆ. ಈ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಜಟಿಲವಾಗಿದೆ ಹೀಗಾಗಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಾಯಕರು ನಿನ್ನೆ ಸೋಮವಾರ ಬೆಳಗಾವಿಗೆ ದೌಡಾಯಿಸಿ ಇಂದು ಬೆಳಗಾವಿಯ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿ ಸಂಧಾನ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ತಿಕ್ಕಾಟ,ಗುದ್ದಾಟದ ಬಳಿಕ ಕೊನೆಗೆ ಬೆಳಗಾವಿ ಉತ್ತರದ ಟಿಕೆಟ್ ಯಾರಿಗೆ ಸಿಗಲಿದೆ ಅನ್ನೋದು ಈ ಕ್ಷಣದವರೆಗೂ ಸಸ್ಪೆನ್ಸ್.ಇದೆ.ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇಯ ಪಟ್ಟಿಯಲ್ಲಿ ಬೆಳಗಾವಿ ಉತ್ತರಕ್ಕೆ ಉತ್ತರ ಸಿಗುವ ಸಾಧ್ಯತೆ ಇದೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *