ಬೆಳಗಾವಿ :
ಬಿಜೆಪಿಯ ಮಾಸ್ಟರ್ ಮೈಂಡ್ ಎಂದೇ ಖ್ಯಾತರಾಗಿರುವ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಇಂದು ದಿಢೀರ್ ಬೆಳಗಾವಿಗೆ ಆಗಮಿಸುತ್ತಿದ್ದಾರೆ.
ಬೆಳಗ್ಗೆ 11 ಗಂಟೆಗೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡೆದ್ದಿರುವ ನಾಯಕರ ಜೊತೆ ಮುಖಾಮುಖಿ ಹಾಗೂ ದೂರವಾಣಿ ಮೂಲಕ ಸಂಪರ್ಕ ಮಾಡಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಈ ಮೂಲಕ ಈಗಾಗಲೇ ಆಗಿರುವ ಹಾನಿಯನ್ನು ಸರಿಪಡಿಸಲು ಸ್ವತಹ ಅವರೇ ಮುಂದಾಗುತ್ತಿರುವುದು ವಿಶೇಷವಾಗಿದೆ.
ಈ ಸಭೆ ಮುಕ್ತಾಯದ ನಂತರ ಬಿಜೆಪಿ ಡಿಜಿಟಲ್ ಮೀಡಿಯಾ ಕಾರ್ಯಕರ್ತರ ಜೊತೆ ಸಂವಾದ ನಡೆಸಲಿದ್ದಾರೆ. ಒಟ್ಟಾರೆ ಸಂತೋಷಜೀ ಬೆಳಗಾವಿಯಲ್ಲಿ
ಇಡೀ ದಿನ ಇರಲಿದ್ದು ಬಂಡಾಯ ಶಮನ ಗೊಳಿಸುವ ನಿಟ್ಟಿನಲ್ಲಿ ಮುಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ.
ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡೆದ್ದಿರುವ ನಾಯಕರ ಬಂಡಾಯ ಶಮನವಾಗಿದೆ. ಆದರೆ ಬೈಲಹೊಂಗಲ ಸೇರಿದಂತೆ ಕೆಲ ಮತಕ್ಷೇತ್ರಗಳಲ್ಲಿ ಇನ್ನೂ ಬಂಡಾಯ ಆರಿಲ್ಲ. ಈ ನಿಟ್ಟಿನಲ್ಲಿ ಅವರು ಸ್ವತಃ ಬಂಡಾಯಗಾರರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ತಮ್ಮ ಒಂದು ಕಾಲದ ಮಾನಸ ಪುತ್ರರೆನಿಸಿದ ಲಕ್ಷ್ಮಣ ಸವದಿ ಅವರು ಬಿಜೆಪಿ ಬಿಟ್ಟು ಹೊರ ಹೋಗಿದ್ದರಿಂದ ಆಗಿರುವ ಹಾನಿ ಬಗ್ಗೆ ಗಂಭೀರವಾಗಿ ಗಮನ ಕೇಂದ್ರೀಕರಿಸಲಿದ್ದಾರೆ.
ಒಟ್ಟಾರೆ ಸಂತೋಷ್ ಜೀ ಭೇಟಿ ಬೆಳಗಾವಿ ಜಿಲ್ಲೆಯ ಒಟ್ಟಾರೆ ರಾಜಕೀಯ ಬಂಡಾಯಕ್ಕೆ ತಾರ್ಕಿಕ ಅಂತ್ಯ ಹಾಡಲು ಇದೀಗ ರಣಾಂಗಣಕ್ಕೆ ಪ್ರವೇಶಿಸಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ