ಬೆಳಗಾವಿ- ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆಯ ರಾಜಕೀಯ ದಿಕ್ಸೂಚಿ ಬದಲಾಗುತ್ತಿದೆ ಪಕ್ಷಾಂತರ ಹಾವಳಿ ಶುರುವಾಗಿದೆ
ಎಂಈಎಸ್ ನಾಯಕ ಮಾಜಿ ಮಹಾಪೌರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಎಂಈಎಸ್ ರೆಬೆಲ್ ಅಭ್ಯರ್ಥಿ ಶಿವಾಜಿ ಸುಂಠಕರ ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಎಂಈಎಸ್ ತೊರೆದು ಬಿಜೆಪಿ ಸೇರಲಿದ್ದಾರೆ
ಇವರ ಜೊತೆಗೆ ಖ್ಯಾತ ನ್ಯಾಯವಾದಿ ಎಜಿ ಮುಳವಾಡಮಠ ಅವರೂ ಅಧಿಕೃತವಾಗಿ ಇಂದು ಬಿಜೆಪಿ ಸೇರಲಿದ್ದಾರೆ
ಮುಳವಾಡಮಠ ಅವರ ಬಿಜೆಪಿ ಸೇರ್ಪಡೆಯಿಂದ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹಿನ್ನಡೆ ಆಗಲಿದೆ
ಶಿವಾಜಿ ಸುಂಠಕರ ಬಿಜೆಪಿ ಸೇರ್ಪಡೆಯಿಂದ ಎಂಈಎಸ್ ಮಾಜಿ ಶಾಸಕ ಕಿಣೇಕರ ನಿರಾಳವಾಗಿದ್ದು ಗ್ರಾಮೀಣ ಕ್ಷೇತ್ರದಲ್ಲಿ ಮೊತ್ತಬ್ಬ ಎಂಈಎಸ್ ರೆಬೆಲ್ ಕ್ಯಾಂಡಿ ಡೇಟ್ ಹೊರ ಬರುವದು ಗ್ಯಾರಂಟಿ
ಅಥಣಿ ತಾಲೂಕಿನಲ್ಲಿ ಶ್ರೀಮಂತ ಪಾಟೀಲ ಜೆಡಿಎಸ ತೊರೆದು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಶ್ರೀಮಂತ ಪಾಟೀಲ ಅಥಣಿ ಕಾಂಗ್ರೆಸ್ ಗೆ ಎಂಟ್ರೀ ಹೊಡೆಯಲಿದ್ದು ಇಲ್ಲಿಯ ಮೂಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಕಂಗಾಲ್ ಆಗಿದ್ದಾರೆ
ಬೈಲಹೊಂಗಲ ತಾಲ್ಲೂಕಿನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಬಿಜೆಪಿ ಮಾಜಿ ಶಾಸಕ ಜಗದೀಧ ಮೆಟಗುಡ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ಧಿ ಬೈಲಹೊಂಗಲ ದಲ್ಲಿ ಚರ್ಚೆಗೆ ಗ್ರಾಸವಾಗಿದೆ
ಕಿತ್ತೂರಿನಲ್ಲಿ ರಾಜಕೀಯ ಕಿತ್ತಾಟ ಶುರುವಾಗಿದ್ದು ಡಿಬಿ ಇನಾಮದಾರ ಪುತ್ರ ವಿಕ್ರಮ್ ಇನಾಮದಾರ ಈ ಬಾರಿ ಕಣಕ್ಕೆ ಇಳಿಯಲಿದ್ದು ಇವರ ಹತ್ತಿರದ ಸಮಂಧಿ ಬಾಬಾಸಾಹೇಬ್ ಪಾಟೀಲ್ ಕಾಂಗ್ರೆಸ್ ಟಿಕೆಟ್ ಗಾಗಿ ಲಾಭಿ ನಡೆಸಿದ್ದು ಟೆಕೆಟ್ ಸಿಗದಿದ್ದರೆ ಜೆಡಿಎಸ್ ಅಥವಾ ಸ್ವತಂತ್ರವಾಗಿ ಸ್ಪರ್ಧೆ ಮಾಡುವ ಸಂದೇಶವನ್ನು ಕಿತ್ತೂರ ಕ್ಷೇತ್ರದಲ್ಲಿ ತೇಲಿ ಬಿಟ್ಡಿದ್ದಾರೆ
ಕಿತ್ತೂರ ಬಿಜೆಪಿಯಲ್ಲಿ ಮಾಜಿ ಶಾಸಕ ಸುರೇಶ ಮಾರಿಹಾಳ,ಮಹಾಂತೇಶ ದೊಡಗೌಡ್ರ ದಾಸ್ತಿಕೊಪ್ಪ ಗೌಡ್ರು ಸಿದ್ರಾಮಣಿ ಸೇರಿದಂತೆ ಅನೇಕ ಜನ ಆಕಾಂಕ್ಷಿಗಳು ಬಿಜೆಪಿ ಟೆಕೆಟ್ ಪಡೆಯಲು ಲಾಭಿ ಶುರು ಮಾಡಿದ್ದಾರೆ
ಬೆಳಗಾವಿ ಉತ್ತರದಲ್ಲಿ ಬಿಜೆಪಿ ಟೆಕೆಟ್ ಗಾಗಿ ಅಗಣಿತ ಆಕಾಂಕ್ಷಿಗಳು ಸರದಿಯಲ್ಲಿ ನಿಂತುಕೊಂಡಿದ್ದು ಬಿಜೆಪಿ ಟಿಕೆಟ್ ಆಕಾಂಕ್ಷಿ ಶಶಿಕಾಂತ ಸಿಧ್ನಾಳ ಟಿಕೆಟ್ ತೀರ್ಮಾಣವಾಗುವ ಮೊದಲೇ ಬಂಡಾಯದ ಬಾವುಟ ಹಾರಿಸಿದ್ದು ಬಿಜೆಪಿ ಟಿಕೆಟ್ ಸಿಗದಿದ್ದರೆ ಕನ್ನಡ ಮರಾಠಿ ಏಕೀಕರಣ ಸಮೀತಿ ಹುಟ್ಟು ಹಾಕಿ ಆ ಸಮೀತಿಯ ಅಭ್ಯರ್ಥಿ ಯಾಗಿ ಸ್ಪರ್ದೆ ಮಾಡುವದಾಗಿ ಬಿಜೆಪಿಗೆ ಬಂಡಾಯದ ಸಂದೇಶ ರವಾನಿಸಿದ್ದಾರೆ
ಶಶಿಕಾಂತ ಸಿಧ್ನಾಳ ಉತ್ತರದಿಂದ ಸ್ಪರ್ದೆ ಮಾಡಿದ್ದಲ್ಲಿ ಇವರು ಕಾಂಗ್ರೆಸ್ಸಿಗೆ ಮುಳುವಾಗಲಿದ್ದಾರೆ