ಬೆಳಗಾವಿಯಲ್ಲಿ ಆರ.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ ಅವರು ದಾಖಲೆ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಸಂಸದೀಯ ಕಾರ್ಯದರ್ಶಿ ಗಳಿಗೆ ಎಷ್ಟು ದುಡ್ಡು ಖರ್ಚಾಗುತ್ತಿದೆ ಸರ್ಕಾರದ ಎಷ್ಟು ಹಣ ಪೋಲಾಗುತ್ತಿದೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ
ರಾಜ್ಯ ಸರ್ಕಾರದಿಂದ ಸಂಸದೀಯ ಕಾರ್ಯದರ್ಶಿಗಳ ಹೆಸರಲ್ಲಿ ಲಕ್ಷಾಂತರ ರುಪಾಯಿ ಹಣ ಪೋಲಾಗುತ್ತಿದೆ
ಸರ್ಕಾರ 16 ತಿಂಗಳಲ್ಲಿ 12 ಜನ ಸಂಸದೀಯ ಕಾರ್ಯದರ್ಶಿಗಳಿಗೆ 3 ಕೋಟಿ 64 ಲಕ್ಷ 72 ಸಾವಿರ ಭತ್ತೆಗಾಗಿ ವೆಚ್ಚ ಮಾಡಿದೆ. ಆದ್ರೆ ಈವರೆಗೂ ಯಾವೊಬ್ಬ ಸಂಸದೀಯ ಕಾರ್ಯದರ್ಶಿಗಳು ಸಭೆ ನಡೆಸಿಲ್ಲ. ಎಂದು ಸಮಾಜ ಸೇವಕ ಭೀಮಪ್ಪ ಗಡಾದ ಆರೋಪಿಸಿದ್ದಾರೆ
ಸರ್ಕಾರಕ್ಕೆ ಆಯಾ ಇಲಾಖೆ ಬಗ್ಗೆ ಸಲಹೆ ಸೂಚನೆಗಳನ್ನೆ ನೀಡದಿರುವುದು
ಆರ.ಟಿ.ಐ ಅಡಿ ಅಂಶ ಬೆಳಕಿಗೆ ಬಂದಿದೆ.
12 ಜನರಲ್ಲಿ 10 ಜನ ಸಂಸದೀಯ ಕಾರ್ಯದರ್ಶಿಗಳು 16 ತಿಂಗಳಲ್ಲಿ 35 ಲಕ್ಷ 95 ಸಾವಿರದ 700 ರುಪಾಯಿ ಭತ್ತೆ ಪಡೆದಿದ್ದಾರೆ.
ಕಂದಾಯ ಇಲಾಖೆ ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ 7 ಲಕ್ಷ 35 ಸಾವಿರ ಹಾಗೂ ಹಾಲಿ ಸಚಿವ ಪ್ರಮೋದ ಮಧ್ವರಾಜ 15 ಲಕ್ಷ 62 ಸಾವಿರ ಮಾತ್ರ ಪಡೆದುಕೊಂಡಿದ್ದಾರೆ. ಇವರಿಬ್ಬರು ಮನೆ ಬಾಡಿಗೆ,ಮನೆ ನಿರ್ವಹಣೆ ಭತ್ತೆ ಪಡೆದಿಲ್ಲ ಎಂದು ಭೀಮಪ್ಪ ಗಡಾದ ತಿಳಿಸಿದ್ದಾರೆ
ಸಾರ್ವಜನಿಕ ತರಿಗೆ ರೂಪ ಸಂಗ್ರಹವಾದ ಹಣ ಪೋಲಾಗುತ್ತಿದೆ. ಸರ್ಕಾರದ ಆಶಯದಂತೆ ಸಂಸದೀಯ ಕಾರ್ಯದರ್ಶಿಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಗಡಾದ್ ಆರೋಪ ಮಾಡಿದ್ದಾರೆ
ಸಂಸದೀಯ ಕಾರ್ಯದರ್ಶಿ ಹುದ್ದೆ ಅನವಶ್ಯಕವಾಗಿದೆ ಎಂದ ಭೀಮಪ್ಪ ಗಡಾದ ಅಭಿಪ್ರಾಯ ಪಟ್ಟಿದ್ದಾರೆ