Breaking News

ಗೊಂದಲದ ಗೂಡಾಗಲಿರುವ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ

ಬೆಳಗಾವಿ- ಇಂದು ಸೋಮವಾರ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯಲಿದ್ದು ಈ ಸಭೆ ಎಂಈಎಸ್ ಭಿನ್ನಮತದ ಸೇಡಿಗೆ ಆಹುತಿಯಾಗಲಿದೆ

ಇತ್ತೀಚಿಗೆ ನಡೆದ ಸ್ಥಾಯಿ ಸಮೀತಿಗಳ ಅಧ್ಯಕ್ಷರ ಚುನಾವಣೆಯಲ್ಲಿ ಎಂಈಎಸ್ ನಗರ ಸೇವಕರ ಒಂದು ಗುಂಪು ತಟಸ್ಥವಾಗಿ ಉಳಿದ ಪರಿಣಾಮ ಮೂರು ಸ್ಥಾಯಿ ಸಮೀತಿಗಳಿಗೆ ಕನ್ನಡ ನಗರಸೇವಕರೇ ಆಯ್ಕೆಯಾಗಿದ್ದರು ಈ ವಿಷಯವನ್ನೇ ಮುಂದಿಟ್ಟುಕೊಂಡು ಕೆಲವು ಎಂಈಎಸ್ ನಗರ ಸೇವಕರ ಎರಡು ಗುಂಪುಗಳು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗುವ ಸಾಧ್ಯತೆಗಳಿವೆ
ಜೊತೆಗೆ ಪಾಲಿಕೆ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಭಾರತ ರತ್ನ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮೇಯರ್ ಸಂಜೋತಾ ಬಾಂಧೇಕರ ಅವರಿಗೆ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ನೀಡದೇ ಶಾಸಕ ಫಿರೋಜ್ ಸೇಠ ಅವರಿಗೆ ಅಧ್ಯಕ್ಷ ಸ್ಥಾನ ನೀಡಿ ಪಾಲಿಕೆ ಅಧಿಕಾರಿಗಳು ಶಿಷ್ಟಾಚಾರವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಎಂಈಎಸ್ ನಾಯಕರು ಇಂದು ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಗದ್ದಲ ಮಾಡುವದರಲ್ಲಿ ಸಂದೇಹವೇ ಇಲ್ಲ
ನೀರಿನ ಕರ ಹೆಚ್ಚಳ, ಮತ್ತು ಆಸ್ತಿ ತೆರಿಗೆ ಹೆಚ್ಚಳದ ವಿಷಯಗಳು ಸಭೆಯ ಅಜೇಂಡಾದಲ್ಲಿವೆ ಹೀಗಾಗಿ ಆಸ್ತಿ ಕರ ಹೆಚ್ಚಳ ,ಮತ್ತು ನೀರಿನ ಕರ ಹೆಚ್ಚಳ ಮಾಡುವದನ್ನು ವಿರೋಧಿಸಿಸಿ ನಗರ ಸೇವಕರು ಸಭೆಯನ್ನು ಬೈಕಾಟ್ ಮಾಡುವ ಸಾಧ್ಯತೆಗಳಿವೆ

ಸಭೆಯಲ್ಲಿ ಮೊಳಗಲಿರುವ ನಾಡಗೀತೆ
ಜಿಲ್ಲಾಧಿಕಾರಿ ಎನ್ ಜಯರಾಮ ಅವರು ಸ್ಥಾಯಿ ಸಮೀತಿಗಳ ಚುನಾವಣೆಯ ಸಂಧರ್ಭದಲ್ಲಿ ಪಾಲಿಕೆ ಯ ಕೌನ್ಸೀಲ್ ಹಾಲ್ ನಲ್ಲಿ ಸಭೆಯ ಆರಂಭದಲ್ಲಿ ನಾಡಗೀತೆಯನ್ನು ನುಡಿಸಿ ಹೊಸ ಇತಿಹಾಸ ಮಾಡಿದ್ದರು
ಇಂದು ನಡೆಯುವ ಸಾಮಾನ್ಯ ಸಭೆಯ ಆರಂಭದಲ್ಲಿ ಮತ್ತೇ ನಾಡಗೀತೆ ಝೇಂಕರಿಸಲಿದೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *